ಹಗರಣಗಳೇ AAP ಕೊಚ್ಚಿ ಹೋಗುವಂತೆ ಮಾಡಿದೆ-ಕೇಜ್ರಿವಾಲ್ ವಿರುದ್ದ ಅಣ್ಣಾ ಹಜಾರೆ ವಾಗ್ದಾಳಿ

ನವದೆಹಲಿ,ಫೆಬ್ರವರಿ,8,2025 (www.justkannada.in):  ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು,  ಆಪ್(AAP) ಹಿನ್ನಡೆ ಸಾಧಿಸಿ ಅಧಿಕಾರ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಪ್ ಮುಖ್ಯಸ್ಥ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ದ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಅಣ್ಣಾ ಹಜಾರೆ, ಹಣದ ಆಸೆಗೆ ಅಬಕಾರಿ ಹಗರಣ ಮಾಡಿದರು. ಹಗರಣಗಳೇ ಈಗ ಅಪ್ ಕೊಚ್ಚಿ ಹೋಗುವಂತೆ ಮಾಡಿದೆ  ಎಂದು ಕಿಡಿಕಾರಿದ್ದಾರೆ.

ಅಭ್ಯರ್ಥಿಯ ನಡವಳಿಕೆ ಅಲೋಚನೆ ಶುದ್ದವಾಗಿರಬೇಕು. ಜೀವನವು ದೋಷರಹಿತವಾಗಿರಬೇಕು ತ್ಯಾಗ ಇರಬೇಕು.  ಇದನ್ನ ನಾನು ಯವಾಗಲೂ ಹೇಳಿದ್ದೇನೆ. ಈ ಗುಣಗಳು ಜನರು ನಂಬಿಕೆ ಇಡಲು ಅನುವು ಮಾಡಿಕೊಡುತ್ತವೆ.  ಈ ವಿಚಾರವನ್ನ ಹಿಂದಯೇ ಕೇಜ್ರಿವಾಲ್ ಗೆ ಹೇಳಿದ್ದೆ ಅದರೆ ಅವರು ಗಮನ ಹರಿಸಲಿಲ್ಲ ಎಂದರು.

ಕೇಜ್ರಿವಾಲ್ ಮದ್ಯದ ಹಗರಣದಲ್ಲಿ ಮುಳುಗಿದ್ದರು.  ಹಗರಣಗಳೇ ಅಪ್ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಅಣ್ಣ ಹಜಾರೆ ಹೇಳಿದರು.

Key words: Scams, AAP, Aravind Kejrival, Anna Hazare,