ಮೈಸೂರು,ಮಾರ್ಚ್,6,2021(www.justkannada.in): ವೇಗದ ಇಂಟರ್ ನೆಟ್ ಸೇವೆಗೆ ಹೆಸರುವಾಸಿಯಾಗಿರುವ ‘ಯಶ್ ಟೆಲ್ ಬ್ರಾಡ್ ಬ್ಯಾಂಡ್’ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆ ‘ಯೂ ಡಿಜಿಟಲ್’ ಆರಂಭಿಸಿ ಒಂದು ವರ್ಷವಾಗಿದೆ. ಈ ನಿಟ್ಟಿನಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಎಂಎಸ್ ಓ ಯಶಸ್ವಿಯಾಗಿ ಒಂದು ವರ್ಷ ಸಂಸ್ಥೆ ಪೂರೈಸಿದೆ. ಈಗಾಗಲೇ ಒಂಬತ್ತು ಜಿಲ್ಲೆಗಳಲ್ಲಿ ಸೇವೆ ನೀಡುತ್ತಿರುವ ಈ ಸಂಸ್ಥೆ ರಾಜ್ಯದಾದ್ಯಂತ ಸೇವೆ ನೀಡುವಂತಾಗಲಿ ಎಂದು ಹಾರೈಸಿದರು. ಇದರ ಬೆಳವಣಿಗೆಗೆ ಕಾರಣರಾದ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಮತ್ತು ತಂಡಕ್ಕೆ ಹಾಗೂ ಕೇಬಲ್ ಆಪರೇಟರ್ ಗಳಿಗೆ ಅಭಿನಂದನೆ ಸಲ್ಲಿಸಿದರು.
ಮೈಸೂರು ಮೂಲದ ‘ಯೂ ಡಿಜಿಟಲ್’ ಸಂಸ್ಥೆ ರಾಜ್ಯದ ಮೊದಲ ಮಲ್ಟಿ ಸರ್ವಿಸಸ್ ಆರಪೇಟರ್ ಆಗಿ ಹೊರ ಹೊಮ್ಮಿದ್ದು, ಈಗಾಗಲೇ ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ತುಮಕೂರು, ಕೋಲಾರ, ರಾಯಚೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲಿ ಸೇವೆ ನೀಡುತ್ತಿದೆ. ಈ ಮತ್ತಷ್ಟು ಯಶಸ್ಸು ಕಾಣಲೆಂದು ಗಣ್ಯರು ಹಾರೈಸಿದರು.
ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಶಾಸಕ ಎಲ್. ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮುಖ್ಯಸ್ಥ ಡಾ.ಸಂತೃಪ್ತ್, ಕೆ.ಆರ್.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಯೋಗೀಶ್, ಪೊಲೀಸ್ ಇನ್ಸ್ ಪೆಕ್ಟರ್ ಎ.ಮಲ್ಲೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಹಿರಿಯ ಕೇಬಲ್ ಆಪರೇಟರ್ ಸುಂದರಂ ಬಸಪ್ಪ ಹಾಗೂ ಮತ್ತೊಬ್ಬ ಅನುಭವಿ ಕೇಬಲ್ ಆಪರೇಟರ್ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕೇಬಲ್ ಆಪರೇಟರ್ ಗಳ ಬಳಗವು ‘ಯೂ ಡಿಜಿಟಲ್’ ಮುಖ್ಯಸ್ಥ ಕೆ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಿತು.
ಬಳಿಕ ಝೀ ಕನ್ನಡ ವಾಹಿನಿಯ ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳು ತಂಡದ ಹಲವು ಹೆಸರಾಂತ ಕಲಾವಿದರಿಂದ ಮನಮೋಹಕ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕರಾದ ಜಯಲಕ್ಷ್ಮಿ ಮತ್ತು ಸಾಗರ ಪ್ರದೀಪ ಹಾಜರಿದ್ದರು.
Key words: Anniversary – U Digital – Yeshtel-mysore- public tv –ranganath