ಕೀವ್,ಮಾರ್ಚ್,2,2022(www.justkannada.in): ಉಕ್ರೇನ್ ನಲ್ಲಿ ರಷ್ಯಾ ದಾಳಿ ವೇಳೆ ಭಾರತೀಯ ಕರ್ನಾಟಕ ಮೂಲದ ನವೀನ್ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಉಕ್ರೇನ್ ನಲ್ಲಿ ಮೃತಪಟ್ಟಿದ್ದಾರೆ. ಆದರೆ ಇವರು ಸಾವನ್ನಪ್ಪಿರುವುದು ರಷ್ಯಾ ದಾಳಿಯಿಂದಲ್ಲ.
ಹೌದು ಉಕ್ರೇನ್ ನಲ್ಲಿ ಪಂಜಾಬ್ ರಾಜ್ಯದ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ (22) ಮೃತಪಟ್ಟಿದ್ದಾರೆ. ಚಂದನ್ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು( ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು).
ಚಂದನ್ ಜಿಂದಾಲ್ ಗೆ ಪಾರ್ಶವಾಯು ಉಂಟಾಗಿ ಅವರನ್ನು ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಂದನ್ ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ವಾಪಸ್ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಚಂದನ್ ಜಿಂದಾಲ್ ಉಕ್ರೇನ್ ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದರು ಎನ್ನಲಾಗಿದೆ.
Key words: Another –Indian- student -dies – Ukraine.