ನವದೆಹಲಿ,ಡಿಸೆಂಬರ್,6,2021(www.justkannada.in): ಕೊರೋನಾ ಹರಡದಂತೆ ತಡೆಗಟ್ಟಲು ದೇಶದಲ್ಲಿ ಲಸಿಕಾ ಅಭಿಯಾನ ಶುರು ಮಾಡಿದ್ದು, ಜನರಿಗೆ ಉಚಿತ ವ್ಯಾಕ್ಸಿನ್ ಹಾಕಲಾಗುತ್ತಿದೆ. ಈ ಮಧ್ಯೆ ಲಸಿಕಾ ಅಭಿಯಾನದಲ್ಲಿ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ.
ಇತ್ತೀಚೆಗಷ್ಟೆ 100 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಲಾಗಿತ್ತು. ಇದೀಗ ದೇಶದ ಶೇ.50ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ಪೂರ್ಣಗೊಳಿಸಲಾಗಿದೆ. ಈ ಲಸಿಕೆ ಅಭಿಯಾನ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ದೇಶದ ಶೇ.50ರಷ್ಟು ಜನರಿಗೆ ಎರಡೂ ಡೋಸ್ ಪೂರ್ಣಗೊಳಿಸಲಾಗಿದೆ. ಅರ್ಧ ಭಾರತಕ್ಕೆ ಸಂಪೂರ್ಣ ಲಸಿಕಾಕರಣ ಮಾಡಲಾಗಿದೆ.ಈ ಮೂಲಕ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದಿದ್ದಾರೆ.
ಇದು ನಮ್ಮ ಸಂಭ್ರಮವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ. ಮಾಸ್ಕ್ , ಸಾಮಾಜಿಕ ಅಂತರ ಮರೆಯದಿರೋಣ. ಕೊರೊನಾ ನಿಯಮ ಪಾಲಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ENGLISH SUMMARY…
COVID Vaccination campaign achieves another milestone
New Delhi, December 6, 2021 (www.justkannada.in): The Govt. of India has launched a COVID vaccination campaign to prevent the spread of pandemic and is providing vaccination to all free of cost. The vaccine campaign has achieved another milestone now.
The campaign has reached administering of 100 crore doses of vaccine, covering 50% of the total population of the country. Prime Minister Narendra Modi in his tweet has informed that 50% of the total population of India have now been vaccinated against the COVID-19 Pandemic. With this half the population have been completely vaccinated setting another milestone.
“While the new milestone has increased the happiness, let us not forget following guidelines like wearing of masks, maintaining social distancing, etc.,” the PM’s tweet read.
Keywords: COVID-19 Pandemic/ vaccine campaign/ another milestone/ PM Narendra Modi tweet
Key words: Another -milestone – vaccine- campaign.