ಬೆಂಗಳೂರು,ಸೆಪ್ಟಂಬರ್,24,2020(www.justkannada.in): ರಾಜ್ಯ ಕೃಷಿ,ತೋಟಗಾರಿಕೆ, ಪಶುಸಂಗೋಪಾನೆ ವಿಶ್ವವಿದ್ಯಾಲಯಗಳಿಗೆ 2020-21ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳಿಗೆ ಆನ್ಲೈನ್ ಮೂಲಕ ಕೃಷಿಕರ ಕೋಟಾದಡಿಯಲ್ಲಿ ಪ್ರವೇಶಾತಿ ಮೂಲ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿದೆ.
ಸಿಇಟಿ 2020 ರಲ್ಲ ರ್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಆ.29 ರೊಳಗೆ ಮೂಲದಾಖಲೆಗಳನ್ನು ಅಪ್ಲೋಡ್ ಮಾಡಲು ಕೊನೆಯ ದಿನ ನಿಗದಿಪಡಿಸಲಾಗಿತ್ತು. ಇದೀಗ ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡದೇ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ್ದು ದಿನಾಂಕ ವಿಸ್ತರಿಸಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಮೂಲದಾಖಲೆಗಳನ್ನು ಇಲ್ಲಿಯವರೆಗೆ ಅಪ್ಲೋಡ್ ಮಾಡದೇ ಇರುವ ಅಭ್ಯರ್ಥಿಗಳು ಸೆ.25 ರಿಂದ 29 ರೊಳಗೆ ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿದ್ದು, ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಲು ಈಗ ಸೆ.29 ಕೊನೆಯ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಆದಷ್ಟುಬೇಗ ಅಂತಿಮ ದಿನದೊಳಗೆ ದಾಖಲೆಗಳನ್ನು ಅಪ್ಲೋಡ್ ಮಾಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಅಲ್ಲದೇ ಈ ಮೊದಲು ಶುಲ್ಕ ಪಾವತಿಸಿ ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಅನರ್ಹರಾದ ಅಭ್ಯರ್ಥಿಗಳಿಗೂ ಕೂಡ ಮತ್ತೊಂದು ಅವಕಾಶ ಕಲ್ಪಿಸಿಕೊಡಲಾಗಿದ್ದು, ಸಂಬಂಧಪಟ್ಟ ಆಯಾ ಕೃಷಿ ವಿದ್ಯಾವಿದ್ಯಾಲಯ ಪರಿಶೀಲನಾ ಕೇಂದ್ರಗಳಿಗೆ ಅಭ್ಯರ್ಥಿಗಳು ಖುದ್ದು ಭೇಟಿ ನೀಡಿ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಪರಿಶೀಲಿಸಿಕೊಳ್ಳಬಹುದಾಗಿದೆ.
Key words: Another -opportunity – upload- document-qualify – degrees-agriculture