ಶ್ರೀಹರಿಕೋಟ,ಜು,22,2019(www.justkannada.in): ದೇಶದ ಹಿರಿಮೆ ಹೆಚ್ಚಿಸುವ ಚಂದ್ರಯಾನ-2 ಗಗನನೌಕೆ ನಭಕ್ಕೆ ಜಿಗಿದಿದ್ದು ಈ ಮೂಲಕ ಬಾಹ್ಯಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ..
ಇಂದು ಮಧ್ಯಾಹ್ನ 2:43ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್ಎಲ್ವಿ-MkIII-M1 ರಾಕೆಟ್ ನಭಕ್ಕೆ ಹಾರಿತು. ಚಂದ್ರನ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಎಲ್ಲ ದೇಶಗಳೂ ಪ್ರಯತ್ನಿಸುತ್ತಿವೆ. ಬೇರಾವ ದೇಶಗಳೂ ಸಮೀಪಿಸದ `ಚಂದ್ರನ ದಕ್ಷಿಣ ಧ್ರುವ ಪ್ರದೇಶ’ವನ್ನು ತಲುಪಲಾಗುತ್ತಿದೆ. ಈ ಸಂಶೋಧನೆಗಳು ಭಾರತ ಹಾಗೆಯೇ ಮನುಕುಲಕ್ಕೆ ನೆರವಾಗಲಿವೆ. ಇದು ಇನ್ನಷ್ಟು ಯಾನಗಳಿಗೆ ಪ್ರೇರಣೆಯೂ ಆಗಬಲ್ಲದು
ಚಂದ್ರಯಾನ 2 ಯೋಜನೆಗೆ ಸುಮಾರು 978 ಕೋಟಿ ಖರ್ಚಾಗಿದ್ದು ಇದರಲ್ಲಿ ಉಪಗ್ರಹ ನಿರ್ಮಾಣಕ್ಕೆ 603 ಕೋಟಿ ವೆಚ್ಚವಾಗಿದ್ದದೆ. ಹಾಗಯೇ ರಾಕೆಟ್ ಗೆ 375 ಕೋಟಿ ರೂ ಖರ್ಚಾಗಿದೆ. ಚಂದ್ರಯಾನ-2 ಗಗನ ನೌಕೆಯನ್ನ ಹೊತ್ತೊಯ್ದ ಜಿಎಸ್ಎಲ್ವಿ ಎಂಕೆ111 ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎನಿಸಿದೆ. 43.43 ಮೀಟರ್ ಎತ್ತರದ ಈ ರಾಕೆಟನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿದೆ.
Key words: Another- significan- milestone –ISRO-Chandrayaan 2 -Launch