ಬೆಂಗಳೂರು,ಆಗಸ್ಟ್,25,2023(www.justkannada.in): ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದಿದ್ದು, ಚಂದ್ರನ ಮೇಲೆ ಇಳಿಯುವುದಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ ಬಿಡುಗಡೆ ಮಾಡಿದೆ.
ಚಂದ್ರನ ಅಂಗಳಕ್ಕೆ ಪ್ರಜ್ಞಾನ್ ರೋವರ್ ಇಳಿಯುವ ಹೊಸ ವೀಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಇಸ್ರೋ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಇಳಿಯುತ್ತಿರುವುದನ್ನು ಕಾಣಬಹುದಾಗಿದೆ.
ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿದೆ.
ಚಂದ್ರನ ಮೇಲೆ ಚಂದ್ರಯಾನ 3 ಪ್ರಜ್ಞಾನ್ ರೋವರ್ನ ರಥಯಾತ್ರೆ ಆರಂಭವಾಗಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ 3 ಗಂಟೆ ಬಳಿಕ ಪ್ರಜ್ಞಾನ್ ರೋವರ್ ಹೊರಬಂದಿದೆ. ಗುರುವಾರ ರಾತ್ರಿಯಿಂದಲೇ ಲ್ಯಾಂಡರ್ ಮತ್ತು ರೋವರ್ ಅಧ್ಯಯನ ಆರಂಭಿಸಿವೆ. 7 ಉಪಕರಣಗಳು, 7 ವಿಷಯಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿವೆ.
ಪ್ರಗ್ಯಾನ್ ರೋವರ್ ಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ರ್ಯಾಂಪ್ ಮೂಲಕ ನಿಧಾನವಾಗಿ ರೋವರ್ ಕೆಳಗೆ ಇಳಿದಿದೆ. ಮೊದಲಿಗೆ ರೋವರ್ನ ಸೋಲಾರ್ ಫಲಕಗಳು ತೆರೆದುಕೊಂಡಿವೆ. ರೋವರ್ ಕಾರ್ಯಚಟುವಟಿಕೆ ಕುರಿತು ಇಸ್ರೋ ಟ್ವೀಟ್ ಮಾಡಿ ಅಪ್ಡೇಟ್ ನೀಡಿದೆ. ಪೂರ್ವನಿಗದಿಯಂತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ವಿಕ್ರಮ್ ರೋವರ್ನ ಎಲ್ಲಾ ಸಿಸ್ಟಂಗಳು ಯಥಾ ಸ್ಥಿತಿಯಲ್ಲಿವೆ ಎಂದು ಹೇಳಿದೆ.
Key words: Another- Video -Released –ISRO- Rover Landing