ತುಮಕೂರು,ಆಗಸ್ಟ್,16,2023(www.justkannada.in): ಇನ್ನು ಆರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ಮುಖಂಡ ಸಿಟಿ ರವಿಗೆ ಸಹಕಾರಿ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.
ತುಮಕೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹುಚ್ಚರ ಸ್ಟೇಟ್ಮೆಂಟ್ಗೆಲ್ಲ ನಾವು ಉತ್ತರ ಕೊಡಲು ಆಗುವುದಿಲ್ಲ. 6 ತಿಂಗಳಿಗೆ ಸರ್ಕಾರ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ. ಆ ಹೇಳಿಕೆಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
Key words: answer – statement- -Minister -KN Rajanna -Tong -BJP leaders.