ಬೆಂಗಳೂರು,ಆ,1,2020(www.justkannada.in): ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ಸರ್ಕಾರ ನಿಗದಿಗೊಳಿಸಿದ ಹಿನ್ನೆಲೆ ಎಪಿಎಂಸಿ ನಿರ್ದೇಶಕ ಹಾಗೂ ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಿಗೆ ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ (ರಿಜಿಸ್ಟರ್ಡ್.), ದಿ ಬೆಂಗಳೂರು ಹೋಲ್ ಸೇಲ್ ಫುಡ್ ಗ್ರೈನ್ ಅಂಡ್ ಪಲ್ಸಸ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ದಿ ಗ್ರೈನ್ ಮರ್ಚೆಂಟ್ಸ್ ಅಸೋಷಿಯೇಷನ್ ಎಪಿಎಂಸಿ ಯಾರ್ಡ್ ಯಶವಂತಪುರದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರಕ್ಕೆ ದಿ ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ (ರಿಜಿಸ್ಟರ್ಡ್.) ದಿ ಬೆಂಗಳೂರು ಹೋಲ್ ಸೇಲ್ ಫುಡ್ ಗ್ರೈನ್ ಅಂಡ್ ಪಲ್ಸಸ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ದಿ ಗ್ರೈನ್ ಮರ್ಚೆಂಟ್ಸ್ ಅಸೋಷಿಯೇಷನ್ ಎಪಿಎಂಸಿ ಯಾರ್ಡ್ ಯಶವಂತಪುರ, ಬೆಂಗಳೂರು ಇವರಿಂದ ಧನ್ಯವಾದ ಅರ್ಪಿಸಿದವು.
ದಿ ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ (ರಿಜಿಸ್ಟರ್ಡ್.) ದಿ ಬೆಂಗಳೂರು ಹೋಲ್ ಸೇಲ್ ಫುಡ್ ಗ್ರೈನ್ಸ್ ಅಂಡ್ ಪಲ್ಸಸ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ದಿ ಗ್ರೈನ್ ಮರ್ಚೆಂಟ್ಸ್ ಅಸೋಷಿಯೇಷನ್ ಎಪಿಎಂಸಿ ಯಾರ್ಡ್ ಯಶವಂತಪುರ, ಬೆಂಗಳೂರು ರಾಜ್ಯ ಸರ್ಕಾರವು ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಕ್ಕಾಗಿ ಮತ್ತು ನಿರಂತರ ಶ್ರಮವಹಿಸಿದ್ದಕ್ಕಾಗಿ ಯಶವಂತಪುರ ಎಪಿಎಂಸಿ ಯಾರ್ಡ್ ನ ವರ್ತಕರು ಕರ್ನಾಟಕದಾದ್ಯಂತ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಇಂದು ಎಪಿಎಂಸಿ ನಿರ್ದೇಶಕರಾದ ಕರಿಗೌಡ ಅವರಿಗೆ ಹಾಗೂ ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾದ ಸಿ ಆರ್ ಜನಾರ್ಧನರವರಿಗೆ ಮೂರೂ ಸಂಘದ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
ರಾಜ್ಯದಲ್ಲಿರುವ ಎಪಿಎಂಸಿ ವರ್ತಕರ ಬಹುವರ್ಷಗಳ ಬೇಡಿಕೆಯಾದ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ. ಮುಖಾಂತರ ಸಲ್ಲಿಸಿದ ಮನವಿಯನ್ನು ಸರ್ಕಾರವು ಪುರಸ್ಕರಿಸಿದ್ದು, ಎಲ್ಲಾ ಎಪಿಎಂಸಿ ವರ್ತಕರು ಸಂತಸ ವ್ಯಕ್ತಪಡಿಸಿದರು. ಇದರಿಂದ ರೈತರಿಗಷ್ಟೇ ಅಲ್ಲದೇ, ಹಾಗೂ ಎಪಿಎಂಸಿ ಪ್ರಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತದೃಷ್ಠಿಯನ್ನು ಕಾಪಾಡುವ ಸೂಕ್ತ ನಿರ್ಧಾರವಾಗಿದೆ ಎಂದು ವರ್ತಕರ ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ.
Key words: APMC -market -fee – set – 0.35 percent-APMC -Director – FKCCI – President.