ಶಿವಮೊಗ್ಗ,ಮಾರ್ಚ್,4,2024(www.justkannada.in): ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಎಫ್ ಎಸ್ಎಲ್ ವರದಿಯಲ್ಲಿ ಬಯಲಾಗಿದ್ದು ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿದ್ದಕ್ಕಾದರೂ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಭಯೋತ್ಪಾದಕ ಚಟುವಟಿಕೆಗಳ ವಿರುದ್ದ ಬಿಜೆಪಿ ಇದೆ ಡಿಕೆ ಶಿವಕುಮಾರ್ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಘೋ಼ಷಣೆ ಕೂಗಿಲ್ಲ ಎಂದು ಹೇಳಿದ್ದರು. ಆದರೆ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ ಬಯಲಾಗಿದೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಭಂಡರು ರಾಜೀನಾಮೆ ನೀಡಲ್ಲ. ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡಿದ್ದಾರೆ. ರಸ್ತೆ ದೀಪ, ಚರಂಡಿ ಮಾಡಲು ಬಿಜೆಪಿ ಆಡಳಿತಕ್ಕೆ ಬರುವುದಿಲ್ಲ. ಧರ್ಮ, ದೇಶ ಉಳಿಸುವುದಕ್ಕೆ ಆಡಳಿತಕ್ಕೆ ಬರುತ್ತೆ ಎಂದು ಕೆ.ಎಸ್ ಈಶ್ವರಪ್ಪ ನುಡಿದರು.
Key words: Apologize – supporting – traitors-KS Eshwarappa – Congress -leaders.