ಮೈಸೂರು,ಫೆಬ್ರವರಿ,1,2022(www.justkannada.in): ಮೈಸೂರು ವಿಶ್ವ ವಿದ್ಯಾನಿಲಯವು 2021–22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್ಗಳಿಗೆ ಭರ್ತಿಯಾಗದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.
ಕುಲಪತಿಗಳ ಅನುಮೋದನೆ ಮೇರೆಗೆ 2021-22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿ ನೀಡಲಾಗಿದ್ದು, ಭರ್ತಿಯಾಗದ ಸೀಟುಗಳಿಗೆ ಭರ್ತಿ ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಕ್ರಮಗಳನ್ನು ವಹಿಸುವಂತೆ ತಿಳಿಸಿದೆ.
- Admission portals ನಲ್ಲಿ Register ಆಗದೆ ಅಥವಾ Register ಆಗಿ ಪ್ರವೇಶ ಪರೀಕ್ಷೆ ಬರೆದು Admission Application ಹಾಕದೆ ಇರುವಂತಹ ವಿದ್ಯಾರ್ಥಿಗಳು ದಿನಾಂಕ: 03-02-2022 ರಿಂದ 06-02-2022 ಸಂಜೆ 5:00 PM ರೊಳಗೆ Admission portal ನಲ್ಲಿ Register ಆಗಿ ಬಯಸಿದ ಕೋರ್ಸ್ಗೆ ಅರ್ಜಿ ಸಲ್ಲಿಸುವುದು.
- ಈಗಾಗಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಕೋರ್ಸ್ಗಳಿಗೆ ಅವರ ಹೆಸರುಗಳನ್ನು ಮತ್ತೆ ಪರಿಗಣಿಸಲಾಗುವುದು, ಮತ್ತೆ ಅರ್ಜಿ ಹಾಕುವ ಅವಶ್ಯಕತೆಯಿರುವುದಿಲ್ಲ.
- ಹೊಸದಾಗಿ Register ಆಗಿ ಅರ್ಜಿ ಸಲ್ಲಿಸುವವರು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬೇರೆ ಕೋರ್ಸ್ಗಳಿಗೆ ಪ್ರವೇಶ ಬಯಸಿದಲ್ಲಿ (ಅರ್ಹತೆಯಿದ್ದಲ್ಲಿ ಮಾತ್ರ) ರೂ.1,000/-ಗಳನ್ನು (ಕೋರ್ಸ್ ಒಂದಕ್ಕೆ ಪಾವತಿಸಿ ಅರ್ಜಿಯನ್ನು Online ಮುಖಾಂತರ ಸಲ್ಲಿಸಬೇಕು. ಎಲ್ಲಾ ಪಾವತಿಗಳು online ಮುಖಾಂತರವೇ ನಡೆಸತಕ್ಕದ್ದು.
ಅಧ್ಯಯನ ವಿಭಾಗಗಳ ಪ್ರವೇಶಾತಿ ಸಮಿತಿ ಅಧ್ಯಕ್ಷರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಪ್ರವೇಶಾತಿ ನೀಡುವುದು.
- Scheme-A” ಸೀಟುಗಳು ಖಾಲಿ ಉಳಿದು, Scheme-B’ ಸೀಟುಗಳನ್ನು operate ಮಾಡದಿದ್ದಲ್ಲಿ, Scheme-“A` ನಲ್ಲಿಯೇ ಭರ್ತಿ ಮಾಡಿ, ನಂತರ Scheme-B ಸೀಟುಗಳನ್ನು operate ಮಾಡುವುದು.
- Scheme-‘B’ ಸೀಟುಗಳು operate ಆಗಿ, ಒಂದು ವೇಳೆ Scheme-‘A’ ಸೀಟುಗಳು ಖಾಲಿ ಉಳಿದಿದ್ದಲ್ಲಿ, ಅವುಗಳನ್ನು Scheme-‘B’ಗೆ shift ಮಾಡಿ, Scheme’B’ ಆಡಿಯಲ್ಲಿಯೇ ಪ್ರವೇಶಾತಿ ನೀಡುವುದು.
ದಿನಾಂಕ 07-02-2022 ರಿಂದ 09-02-2022ರ ಸಾಯಂಕಾಲ 5-00 ಗಂಟೆಯೊಳಗೆ ಹೊಸದಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ (verification), ಬದಲಾವಣೆಗಳಿದ್ದಲ್ಲಿ Online ನಲ್ಲಿಯೇ ಆಳವಡಿಸುವುದು.
- ದಿನಾಂಕ 10-02-2022 ರಂದು ಬೆಳಗ್ಗೆ 10:00 ರಿಂದ 1:00 ಗಂಟೆಯವರೆಗೆ ವಿಭಾಗದಲ್ಲಿರುವ ರೆಜಿಸ್ಟರಿನಲ್ಲಿ ಸಹಿ ಮಾಡಿದ ವಿದ್ಯಾರ್ಥಿಗಳಿಗೆ Casual round ಮಾದರಿಯಲ್ಲಿ ದಿನಾಂಕ: 10-02-2022ರಂದು ಪ್ರವೇಶಾತಿಯನ್ನು ನಡೆಸಬೇಕು.
- ಸರ್ಕಾರಿ/ಖಾಸಗಿ/ಸಂಯೋಜಿತ ಸ್ವಾಯತ್ತ ಕಾಲೇಜುಗಳಿಗೆ ಮೆರಿಟ್ ಆಧಾರದ ಮೇಲೆ ವರ್ಗವಾರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಾವತಿಸಬೇಕಾದ ಪ್ರವೇಶಾತಿ ಶುಲ್ಕವನ್ನು online ನಲ್ಲಿ ಪಾವತಿಸಿಕೊಂಡು ಪ್ರವೇಶಾತಿ ನೀಡುವುದು.
Key words: Application -admission – courses – Mysore university