ಬೆಂಗಳೂರು,ಅಕ್ಟೋಬರ್,20,2021(www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಯು 2019, 2020 ಮತ್ತು 2021ನೇ ಸಾಲಿನ ಮೂರು ವರ್ಷಗಳ ದತ್ತಿನಿಧಿ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರಿನ “ಅಭಿಮಾನಿ ಪ್ರಕಾಶನ ಸಂಸ್ಥೆಯ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ತಲಾ ಹತ್ತು ಸಾವಿರ ರೂಗಳ ನಗದು ಪ್ರಶಸ್ತಿ ನೀಡಲು ಸಂಸ್ಥೆಗಳು ಒಂದು ಲಕ್ಷ ರೂಗಳ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ.
2019 ಜನವರಿ ಪ್ರಾರಂಭದಿಂದ ಡಿಸೆಂಬರ್-2019 ಅಂತ್ಯದವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿನಿಧಿಸುವ ಲೇಖನ ವರದಿ ಆಭಿಮಾನಿ ಪ್ರಶಸ್ತಿ-2019 ಎಂದು ದಾಖಲಿಸಿ ಹಾಗೂ 2020-ಜನವರಿ ಪ್ರಾರಂಭದಿಂದ ಡಿಸೆಂಬರ್-2020 ರ ಅಂತ್ಯದ ವರೆಗೆ “ಅಭಿಮಾನಿ ಪ್ರಶಸ್ತಿ-2020 ಎಂದು 2021 ಜನವರಿ ಪ್ರಾರಂಭದಿಂದ ಸೆಪ್ಟೆಂಬರ್-2021 ರ ಅಂತ್ಯದವರೆಗೆ ಅಭಿಮಾನಿ ಪ್ರಶಸ್ತಿ” 2021 ಎಂದು ದಾಖಲಿಸಿ ಅಯಾ ವರ್ಷದ ಲೇಖನಗಳನ್ನು ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಮೈಸೂರು ದಿಗಂತ ಪ್ರಶಸ್ತಿ-2019, 2020 ಹಾಗೂ 2021 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ -ಟಿವಿ-ವಾಹಿನಿ. ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರ್ತಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ-ವರದಿಗಳನ್ನು ನವೆಂಬರ್ -23ರ ಒಳಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ “ಅಭಿಮಾನಿ ಪ್ರಶಸ್ತಿ-2019, 2020 2021 ಹಾಗೂ ಮೈಸೂರು ದಿಗಂತ ಪ್ರಶಸ್ತಿ-2019, 2020 ಮತ್ತು 2021 ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ ಕಳುಹಿಸಲು ಆಕಾಡೆಮಿಯ ಅಧ್ಯಕ್ಷ ಕೆ. ಸದಾಶಿವ ಶೆಣೈ ಅವರು ಕೋರಿದ್ದಾರೆ.
Key words: Application – awards -Karnataka Media Academy
ENGLISH SUMMARY…
Applications invited for the Karnataka Media Academy Endowment awards
Bengaluru, October 20, 2021 (www.justkannada.in): The Karnataka Media Academy has invited applications from eligible journalists for the Endowment awards for three years, i.e., 2019, 2020, and 2021, given for best articles.
The Abhimani Prakashana, Bengaluru, and Mysuru Diganta of Mysuru have established a sum of Rs. one lakh as an endowment with the Karnataka Media Academy. While Abhimani Prakashana gives awards along with a cash prize of Rs. 10,000 every year for effective stories addressing social problems appeared in the State-level and District-level Kannada newspapers the Mysuru Diganata gives awards for effective stories on human problems.
Stories depicting social problems that appeared between January 2019 and December 2019 can be sent under the title ‘Abhimani Award-2019’, and stories that appeared between January 2020 and December 2020 and between January 2021 and September 2021 can be sent under the title for ‘Abhimani Award-2020 and ‘Abhimani Award-2021’ respectively. Likewise, effective stories depicting human problems can be sent separately mentioning the title of the award sought.
Only stories written by journalists working in Kannada daily newspapers, TV channels, and Weekly magazines are eligible for the awards. In case if the story doesn’t carry the byline, candidates can obtain a certificate from the Editor of the publication concerned and submit it. The last date of receiving the applications and stories, articles is November 23.
K. Sadashiva Shenoy, President, Karnataka Media Academy has urged eligible journalists to send the applications and reports to the ‘Podium Block, Visveswaraiah Center, Dr. B.R. Ambedkar Veedhi, Bengaluru- 560 001’ and has urged to mention the award sought clearly.
Keywords: Karnataka Media Academy/ awards/ applications invited/ Abhimani Prakashana/ Mysuru Diganta