ಮೈಸೂರಿನ ಐಶ್(AIISH) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು,ಸೆಪ್ಟಂಬರ್,27,2024 (www.justkannada.in): ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ(AIISH)ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಸಂಸ್ಥೆಯಲ್ಲಿ ಖಾಲಿ ಇರುವ ಪ್ರೊಫೆಸರ್, ಅಸೋಸಿಯೇಟ್‌ ಪ್ರೊಫೆಸರ್, ಅಸಿಸ್ಟಂಟ್‌ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು,  ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 17 ಕಡೇ ದಿನವಾಗಿದೆ.

ಹುದ್ದೆಗಳ ಸಂಖ್ಯೆ ಅರ್ಜಿ ಸಲ್ಲಿಸಬೇಕಾದ ವಿಧಾನ, ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರ ಈ ಕೆಳಕಂಡಂತಿದೆ.

ಹುದ್ದೆಗಳು

ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್. ಪೇಥಾಲಜಿ/ ಸ್ಪೀಚ್ ಸೈನ್ಸ್‌) – 1

ಪ್ರೊಫೆಸರ್ (ಇಎನ್‌ಟಿ) – 1

ಪ್ರೊಫೆಸರ್ (ಆಡಿಯೋಲಜಿ) – 1

ಅಸೋಸಿಯೇಟ್‌ ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್. ಪೇಥಾಲಜಿ/ ಸ್ಪೀಚ್ ಸೈನ್ಸ್‌) – 2

ಅಸೋಸಿಯೇಟ್‌ ಪ್ರೊಫೆಸರ್ (ಆಡಿಯೋಲಜಿ) – 2

ಅಸೋಸಿಯೇಟ್‌ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್‌ ಅಂಡ್ ಅಕೌಸ್ಟಿಕ್ಸ್‌) – 1

ಅಸೋಸಿಯೇಟ್‌ ಪ್ರೊಫೆಸರ್ (ವಿಶೇಷ ಶಿಕ್ಷಣ) – 1

ಅಸೋಸಿಯೇಟ್‌ ಪ್ರೊಫೆಸರ್ (ಕ್ಲಿನಿಕಲ್ ಸೈಕಾಲಜಿ) – 1

ಅಸೋಸಿಯೇಟ್‌ ಪ್ರೊಫೆಸರ್ (ಸ್ಪೀಚ್ ಸೈನ್ಸಸ್) – 3

ಅಸೋಸಿಯೇಟ್‌ ಪ್ರೊಫೆಸರ್ (ಇಎನ್‌ಟಿ) – 1

ಅಸೋಸಿಯೇಟ್‌ ಪ್ರೊಫೆಸರ್ (ಲಾಂಗ್ವೇಜ್ ಪೆಥಾಲಜಿ) – 1

ಅಸೋಸಿಯೇಟ್‌ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್‌) – 1

ಅಸಿಸ್ಟಂಟ್ ಪ್ರೊಫೆಸರ್ (ಇಎನ್‌ಟಿ) – 1

ಅಸಿಸ್ಟಂಟ್ ಪ್ರೊಫೆಸರ್ (ಕ್ಲಿನಿಕಲ್ ಸೈಕಾಲಜಿ) – 1

ಅಸಿಸ್ಟಂಟ್ ಪ್ರೊಫೆಸರ್ (ಇಲೆಕ್ಟ್ರಾನಿಕ್ಸ್‌) – 1

ಅಸಿಸ್ಟಂಟ್ ಪ್ರೊಫೆಸರ್ (ಸ್ಪೀಚ್ ಸೈನ್ಸಸ್) – 2

ಅಸಿಸ್ಟಂಟ್ ಪ್ರೊಫೆಸರ್ (ಲಾಂಗ್ವೇಜ್ ಪೆಥಾಲಜಿ) – 1ಅಸಿಸ್ಟಂಟ್ ಪ್ರೊಫೆಸರ್ (ಸ್ಪೀಚ್ / ಲಾಂಗ್ವೇಜ್ ಪೆಥಾಲಜಿ) – 1

ಅರ್ಜಿ ಸಲ್ಲಿಸಲು ಕಡೇ ದಿನಾಂಕ: 17-10-2024 ರ ಸಂಜೆ 05-30 ಗಂಟೆವರೆಗೆ. ಮೇಲಿನ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ 2 ರಿಂದ 3 ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಲಿಖಿತ ಪರೀಕ್ಷೆ, ಸಂದರ್ಶನ, ಟೀಚಿಂಗ್ ಸ್ಕಿಲ್‌ ಟೆಸ್ಟ್‌ಗಳನ್ನ ಮಾಡಲಾಗುತ್ತದೆ. ನಿಗದಿತ ಅಂಕಗಳ ಆಧಾರದಲ್ಲಿ ಹೆಚ್ಚು ಅಂಕಗಳನ್ನು ಪಡೆದವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹುದ್ದೆಗಳಗೆ ಆಯ್ಕೆ ಬಯಸುವವರು ಈ ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು

ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್, ಎಂಎಸ್‌, ಎಂಡಿ ಅನ್ನು ಸಂಬಂಧಿತ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.

ಪ್ರೊಫೆಸರ್ ಹುದ್ದೆಗಳಿಗೆ 10 ವರ್ಷ ಬೋಧನೆ / ಸಂಶೋಧನೆ ಅನುಭವ ಇರಬೇಕು. 50 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು.

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ Ph.D ನಂತರದ 5 ವರ್ಷ ಬೋಧನೆ / ಸಂಶೋಧನೆ ಅನುಭವ ಇರಬೇಕು. 45 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು.

ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ ಎಂ.ಫಿಲ್ ನಂತರದ 2 ವರ್ಷ ಬೋಧನೆ / ಸಂಶೋಧನೆ ಅನುಭವ ಇರಬೇಕು. 40 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು. ಕ್ರಮವಾಗಿ 13 / 12 / 11 ಪೇ ಲೆವೆಲ್‌ ವೇತನ ಶ್ರೇಣಿ ಇರುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ : The Chief Administrative Officer, O/o the Chief Administrative Officer, All India Institute of Speech and Hearing, Manasagangotri, Mysore – 570006.

ಅರ್ಜಿ ಸಲ್ಲಿಸುವ ವಿಧಾನ

ಅಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು www.aiishmysore.in ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
ಮೇಲಿನ ಪ್ರತಿ ಹುದ್ದೆಗೆ ಬೇರೆ ಬೇರೆ ಅರ್ಜಿ ನಮೂನೆ ಇದ್ದು, ಆಸಕ್ತ ಹುದ್ದೆಯ ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಅರ್ಹತೆಗಳ ಕುರಿತ ದಾಖಲೆಗಳನ್ನು ಸ್ವಯಂ ದೃಢೀಕರಿಸಿ, ವಿಳಾಸಕ್ಕೆ ಸಲ್ಲಿಸುವುದು. ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಬರೆದಿರಬೇಕು.

key words: Applications, invite, various posts, AIISH, Mysore