ಬೆಂಗಳೂರು,ಮಾರ್ಚ್,1,2023(www.justkannada.in): ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆ-2023 ಅನ್ನು 20-05-2023 ಮತ್ತು 21-05-2023 ರಂದು ಹಾಗೂ ಕನ್ನಡ ಭಾಷಾ ಪರೀಕ್ಷೆಯನ್ನು 22-05-2023 ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ ಹೀಗಾಗಿ ಸಿಇಟಿ-2023ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 02-03-2023 ಬೆಳಿಗ್ಗೆ 11.00 ರಿಂದ ಪ್ರಾರಂಭವಾಗಲಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-04-2023 ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 07-04-2023 ಆಗಿದೆ.
ಆನ್ ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ / ಜಾತಿ ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆಯನ್ನು ಮತ್ತು 371(ಜೆ) ಆರ್ ಡಿ ಸಂಖ್ಯೆಯನ್ನು ಆಧರಿಸಿ ಅಭ್ಯರ್ಥಿಯ ಜಾತಿ, ಆದಾಯ ಮತ್ತು 371(ಜೆ) ಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಸೇವೆಯ ಮೂಲಕ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಎಚ್ಚರದಿಂದ ಸರಿಯಾದ ಆರ್ ಡಿ ಸಂಖ್ಯೆಯನ್ನು ಆನ್ ಲೈನ್ ಅರ್ಜಿಯಲ್ಲಿ ದಾಖಲಿಸಲು ಸೂಚಿಸಿದೆ. ಒಂದು ವೇಳೆ ಅಭ್ಯರ್ಥಿಯು ದಾಖಲಿಸುವ ಆರ್ ಡಿ ಸಂಖ್ಯೆ ತಾಳೆಯಾಗದಿದ್ದಲ್ಲಿ, ಜೂನ್ 2023ರ ಮಾಹೆಯಲ್ಲಿ ಪ್ರಾಧಿಕಾರವು ನೀಡುವ ವೇಳಾಪಟ್ಟಿಯಂತೆ ಖುದ್ದಾಗಿ ಪರಿಶೀಲನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
- .ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಮತ್ತು ಜನ್ಮ ದಿನಾಂಕವನ್ನು ಕರ್ನಾಟಕ SSಎಲ್ ಸಿ ಮಂಡಳಿಯಿಂದ ನೊಂದಣಿ ಸಂಖ್ಯೆಯನ್ನು ಆಧರಿಸಿ ಎಸ್ ಎಸ್ ಎಲ್ ಸಿ ಮೂಲಕ ಪಡೆಯಲಾಗುತ್ತದೆ. ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಮಂಡಳಿಯಿಂದ ತೇರ್ಗಡೆಯಾದ ಅಭ್ಯರ್ಥಿಗಳು SSಐಅ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಲು ಸೂಚಿಸಿದೆ.
- . ಆನ್ ಲೈನ್ ಅಪ್ಲಿಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡುವ ಬಗ್ಗೆ ಸಂದೇಹಗಳಿದ್ದಲ್ಲಿ, ಪ್ರಾಧಿಕಾರದ ಇಮೇಲ್ keaugcet2023@gmail.comಗೆ ಮೇಲ್ ಮಾಡುವ ಮೂಲಕ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
- . ಆನ್ ಲೈನ್ ಅರ್ಜಿಗಳನ್ನು Google Chrome, Microsoft Edge, Firefox ವರ್ಷನ್ 110 ಅಥವಾ ಇನ್ನೂ ಹೆಚ್ಚಿನ ವರ್ಷನ್ ಗಳ ಮೂಲಕ ಉತ್ತಮವಾಗಿ ವೀಕ್ಷಿಸಬಹುದಾಗಿದೆ. ಮೊಬೈಲ್ ಮೂಲಕ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಬಹುದು ಆದರೆ ಪರದೆಯ ಮೇಲೆ ಸ್ಪಷ್ಟವಾಗಿ ಎಲ್ಲಾ ವಿವರಗಳನ್ನು ನೋಡುವುದಕ್ಕಾಗಿ ಡೆಸ್ಕ್ಟಾಪ್ ಗಳನ್ನು ಉಪಯೋಗಿಸಲು ಸಲಹೆ ನೀಡಲಾಗಿದೆ.
ಸಿಇಟಿ-2023ರ ಪ್ರಶ್ನೆ ಪತ್ರಿಕೆಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರು ನಿರ್ಧರಿಸುವ ಮೊದಲನೇ ಮತ್ತು ಎರಡನೇ ಪಿಯುಸಿ ಪಠ್ಯಕ್ರಮವನ್ನು ಅವಲಂಬಿಸಿರುತ್ತದೆ.
ಸಾಮಾನ್ಯ ಪ್ರವೇಶ ಪರೀಕ್ಷೆ 2023ರ ವೇಳಾಪಟ್ಟಿ ಹೀಗಿದೆ.
ದಿನಾಂಕ 20-05-2023 ಶನಿವಾರಬೆಳಿಗ್ಗೆ 10-30ರಿಂದ 11-50ರವರೆಗೆ ಜೀವಶಾಸ್ತ್ರ(60 ಅಂಕಗಳಿಗೆ) ಮಧ್ಯಾಹ್ನ 2-30 ರಿಂದ 3-50ರವರೆಗೆ ಗಣಿತಶಾಸ್ತ್ರ(60 ಅಂಕಗಳಿಗೆ) ಪರೀಕ್ಷೆ ನಡೆಯಲಿದೆ.
ದಿನಾಂಕ 21-05-2023 ರಂದು ಭಾನುವಾರ ಬೆಳಿಗ್ಗೆ 10-30ರಿಂದ 11-50ರವರೆಗೆ ಭೌತಶಾಸ್ತ್ರ(60 ಅಂಕಗಳು) ಮಧ್ಯಾಹ್ನ 2-30 ರಿಂದ 3-50ರವರೆಗೆ ರಸಾಯನಶಾಸ್ತ್ರ(60 ಅಂಕಗಳು) ವಿಷಯದ ಪರೀಕ್ಷೆ ನಡೆಯಲಿದೆ.
ಬೆಂಗಳೂರು, ಬೀದರ, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
22-05-2023ಸೋಮವಾರ ಬೆಳಿಗ್ಗೆ 11-30 ರಿಂದ 12-30 ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ.
Key words: apply – CET exam -admission – professional -courses:-Application -tomorrow.