ಅತಿಥಿ ಉಪನ್ಯಾಸಕರ ನೇಮಕ: ಹಿರಿತನ, ಅರ್ಹತೆಗೆ ಆದ್ಯತೆ.

ಬೆಂಗಳೂರು,ಫೆಬ್ರವರಿ,4,2022(www.justkannada.in):  2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಿಂದ 9,800ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ವರದಿ ವಸ್ತುಸ್ಥಿತಿಗೆ ದೂರವಾಗಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ವರದಿಗೆ ಸ್ಪಷ್ಟನೆ ನೀಡಿರುವ ಅವರು, `ಈವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ ಇವರ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ವಾಸ್ತವ ಹೀಗಿರುವಾಗ, 9,881 ಮಂದಿ ಕೆಲಸ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ?’ ಎಂದರು.

ನೇಮಕ ಪ್ರಕ್ರಿಯೆಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಮೂರನ್ನೂ ಸಮಾನವಾಗಿ ಪರಿಗಣಿಸಲಾಗಿದೆ. ನೇಮಕಾತಿಯಲ್ಲಿ ಇವರಿಗೆ ಆದ್ಯತೆ ಕೊಡಲಾಗುತ್ತಿದೆ. ಜತೆಗೆ ನಿಯಮಾನುಸಾರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುತ್ತಿಲ್ಲ. ಆದರೆ, ಇವರಲ್ಲಿ ಕೂಡ ಹೆಚ್ಚಿನವರು ಅತ್ಯಂತ ಕಡಿಮೆ ಅನುಭವ ಹೊಂದಿದವರಾಗಿದ್ದಾರೆ ಎಂದು ಅವರು ವಿವರಿಸಿದರು.

ಇದುವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಅವರ ಮಾಸಿಕ ವೇತನ 13 ಸಾವಿರ ರೂ. ದಾಟುತ್ತಿರಲಿಲ್ಲ. ಆದರೆ, ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರೂ.ಗಳವರೆಗೆ ಸಿಗುವ ಹಾಗೆ ಮಾಡಲಾಗಿದೆ ಎಂದು ಪ್ರದೀಪ್ ನುಡಿದರು.

ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಇದುವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ‌ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

Key words: Appointment – guest –lecturers- seniority- merit

ENGLISH SUMMARY…

Seniority & Eligibility criterion to appoint guest lecturers: Commissioner

Bengaluru: Dismissing the fears that the increased load will lead to more than half of the guest lecturers losing jobs, The Commissioner, Department of Collegiate & Technical Education (DCTE) has told, out of the 14,000 lecturers working earlier, 10,600 lecturers were being appointed again.

Considering the demands of guest lecturers of government first-grade colleges, the government recently hiked their salary by more than double along with increasing the workload. Even after this 10,600 guest lecturers were being appointed again, P.Pradeep, Commissioner, DCTE, has told.

Earlier, there were around 14,000 guest lecturers and now the appointment is being made on the basis of seniority of experience, age and UGC prescribed qualification. The merit list has been prepared as per the stipulated norms. Since the number of guest lecturers who will get appointed is 10,600, about 3,400 guest lecturers may get affected. Among those who will be affected, most of them are less experienced, he has explained.

Earlier, the maximum salary of guest lecturers could not exceed Rs 13,000 per month even after working for maximum hours. But now their workload has been increased in such a way so that they would get Rs 32,000 per month. Besides, they will be paid salaries before the 10th date every month, he told.