ಬೆಂಗಳೂರು,ಏಪ್ರಿಲ್,18,2021(www.justkannada.in) : ಕೊರೋನಾ ಒಂದು ಅಹಂಕಾರದ ವೈರಸ್. ಅದಾಗಿಯೇ ನಮ್ಮ ಬಳಿ ಬರೋದಿಲ್ಲ. ನಾವು ಆಹ್ವಾನ ಕೊಟ್ಟರೇ ಮಾತ್ರ ನಮ್ಮ ಬಳಿ ಬರಲಿದೆ. ಜನ ಸೂಕ್ತ ಕ್ರಮಗಳನ್ನ ಅನುಸರಿಸಿದ್ರೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.ನಾವೆಲ್ಲಾ ಕೊರೋನಾ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಬೇಕು. ಜನ ಎಸ್.ಎಂ.ಎಸ್ ಸೂತ್ರ ಅನುಸರಿಸಬೇಕು. ಎಸ್ ಅಂದ್ರೆ ಸ್ಯಾನಿಟೈಸ್, ಎಂ ಅಂದ್ರೆ ಮಾಸ್ಕ್ ಹಾಗೂ ಎಸ್ ಅಂದ್ರೆ ಸೋಶಿಯಲ್ ಡಿಸ್ಟೆನ್ಸ್ ಇದನ್ನ ಅನುಸರಿಸಿ ಎಂದರು.
ನಮಗೆ ಕೊರೋನಾ ಬರೋದಿಲ್ಲ ಅಂತ ಜನರು ಓಡಾಡುತ್ತಿದ್ದಾರೆ. ಯಾವುದೋ ಒಂದು ಸಾವು ನಮಗೆ ಸಂಖ್ಯೆ ಆಗಬಾರದು. ಆ ಮನೆಯ ದುಃಖ ನಮಗೆ ಅರ್ಥವಾಗಬೇಕು ಎಂದು ತಿಳಿಸಿದರು.
key words : appropriate-steps-Lockdown-Not Required-Ministe-S.Suresh Kumar