ಮೈಸೂರು,ಆ,11,2020(www.justkannada.in): ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದ್ದು, 125 ಕೋಟಿಗೆ ಸಿಂಗಲ್ ಬಿಡ್ ಮಾಡಲಾಗಿದೆ. ಸಂಪುಟದ ಅನುಮತಿ ಸಿಕ್ಕರೆ ಆ ಕಾರ್ಖಾನೆಯನ್ನೂ ಗುತ್ತಿಗೆ ಪಡೆದು ಮುನ್ನಡೆಸಲಾಗುವುದು ಎಂದು ಶಾಸಕ ಮುರುಗೇಶ್ ಆರ್ ನಿರಾಣಿ ಹೇಳಿದರು.
ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಶಾಸಕರಾದ ಮುರುಗೇಶ್ ಆರ್ ನಿರಾಣಿ ಅವರು ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟನೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಅನಂತರ ಮೈಸೂರು ನಗರ ಬಿಜೆಪಿಯವರ ಜೊತೆ ಸೇರಿ ಕೆಆರ್ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುನರ್ ಆರಂಭಿಸುತ್ತಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ರೈತ ಪರ ನಿಂತ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ಬಿಜೆಪಿ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಶಾಸಕರಾದ ಮುರುಗೇಶ್ ನಿರಾಣಿ, ನಾಲ್ಕು ವರ್ಷಗಳಿಂದ ನಿಂತಿದ್ದ ಕಾರ್ಖಾನೆಯನ್ನು ಅತೀ ಹೆಚ್ಚು ಬಿಡ್ ಮೂಲಕ ಗುತ್ತಿಗೆ ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರಿಣತ ಎಂಜಿನಿಯರ್ ಗಳನ್ನು ಕರೆಸಿ ಯಂತ್ರೋಪಕರಣಗಳನ್ನು ರಿಪೇರಿ ಮಾಡಿಸಲಾಗಿದೆ. 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು.
20 ರೊಳಗೆ ಕಬ್ಬು ಕ್ರಷಿಂಗ್: ‘ಕಬ್ಬು ಅರೆಯಲು ಯಂತ್ರಗಳು ಸಜ್ಜುಗೊಂಡಿದ್ದರೂ, ಮಧ್ಯೆ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿ ಎರಡು ದಿನ ಟ್ರಯಲ್ ನೋಡಿ, ಆ. 20ರೊಳಗೆ ಕಬ್ಬು ಅರೆಯಲು ಪ್ರಾರಂಭಿಸಲಾಗುವುದು. ಕಾರ್ಖಾನೆ ಯಂತ್ರೋಪಕರಣಗಳನ್ನು ಸಂಪೂರ್ಣ ಉನ್ನತೀಕರಣಗೊಳಿಸಿ ಸಕ್ಕರೆ ಮಾತ್ರವಲ್ಲದೆ ವಿದ್ಯುತ್, ಡಿಸ್ಟಲರಿ, ಸ್ಯಾನಿಟೈಸರ್, ಇಥೆನಾಲ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಆದಾಯದ ಶೇ 70 ರಷ್ಟನ್ನು ರೈತರಿಗೆ ನೀಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದ್ದು, 125 ಕೋಟಿಗೆ ಸಿಂಗಲ್ ಬಿಡ್ ಮಾಡಲಾಗಿದೆ. ಸಂಪುಟದ ಅನುಮತಿ ಸಿಕ್ಕರೆ ಆ ಕಾರ್ಖಾನೆಯನ್ನೂ ಗುತ್ತಿಗೆ ಪಡೆದು ಮುನ್ನಡೆಸಲಾಗುವುದು’ ಎಂದು ಹೇಳಿದರು.
ನಂತರ ಮಾತನಾಡಿದ ಶಾಸಕರಾದ ಎಲ್ ನಾಗೇಂದ್ರ ನಿಜವಾಗಲೂ ನಿರಾಣಿಯಿಂದ ರೈತರಿಗೆ ಬಹಳ ಉಪಯೋಗವಾಗುತ್ತದೆ ಈ ಮಹಾಮಾರಿ ಕೂರೂನಾ ಸಂಕಷ್ಟದಲ್ಲೂ ಜನರು ಜೀವನ ಮಾಡುವುದೇ ಬಹಳ ಕಷ್ಟವಾಗುತ್ತದೆ ಅದರಲ್ಲೂ ರೈತರು ಬಹಳ ಕಷ್ಟಪಡುತ್ತಿದ್ದಾರೆಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಪುನರಾರಂಭ ವಾಗುತ್ತಿರುವುದು ರೈತರಿಗೆ ಹಾಗೂ ಮಂಡ್ಯದ ಜನರಿಗೆ ಬಹಳ ಸಂತೋಷದ ವಿಚಾರ ಈ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲರನ್ನೂ ಆಹ್ವಾನಿಸಿ ಉದ್ಘಾಟಿಸುತ್ತಿರುವುದು ಸಂತೋಷಕರ ವಿಚಾರ ಇವರ ಉದ್ಯಮ ಇನ್ನೂ ಹೆಚ್ಚು ಹೆಚ್ಚಾಗಿ ಅಭಿವೃದ್ಧಿಗೊಂಡಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮುಂದಾಗಲಿ ಎಂದು ಹೇಳಿದರು ಹಾಗೆಯೇ ಇಂದು ಕೃಷ್ಣ ಜನ್ಮಾಷ್ಟಮಿ ಕೃಷ್ಣ ಜನ್ಮ ಷ್ಟ್ರೀಯ ಶುಭಾಶಯಗಳು ಹಾಗೂ ಮುರುಗೇಶ್ ನಿರಾಣಿ ರವರೆಗೂ ಜನ್ಮದಿನದ ಶುಭಾಶಯ ಕೋರಿದರು
ಇದೇ ಸಂದರ್ಭದಲ್ಲಿ ಶಾಸಕರಾದ ಎಲ್ ನಾಗೇಂದ್ರ ,ಬಿಜೆಪಿ ನಗರಾಧ್ಯಕ್ಷರಾದ ಟಿಎಸ್ ಶ್ರೀವತ್ಸ ,ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ವಣಿಶ್, ಮಾಧ್ಯಮ ಸಹ ಸಂಚಾಲಕರಾದ ಎನ್ ಪ್ರದೀಪ್ ಕುಮಾರ್ ,ಕೇಬಲ್ ಮಹೇಶ್, ವಿಕ್ರಂ ಅಯ್ಯಂಗಾರ್ ,ಪ್ರಸಾದ್, ಸುಚೀಂದ್ರ ,ಹಾಗೂ ಇನ್ನಿತರರು ಹಾಜರಿದ್ದರು.
Key words: approval – Cabinet, -Srirama -Sugar Factory will -lease –MLA-Murugesh nirani