ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ಜಿಲ್ಲೆಯ ಅಥಣಿಯಲ್ಲಿ ಅಭಿಮಾನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಹುಲ್ ಗಾಡಿವಡ್ಡರ (26) ಮೃತ. ಪುನೀತ್ ರಾಜ್‌ಕುಮಾರ್ ಫೋಟೊಗೆ ಪೂಜೆ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುನೀತ್ ಸಾವಿನಿಂದ ಅವರು ನೊಂದಿದ್ದರು ಎಂದು ತಿಳಿದುಬಂದಿದೆ.
ಇನ್ನು ಪುನೀತ್ ರಾಜ್‌ಕುಮಾರ್ ನಿಧನದಿಂದ ನೊಂದ ಅಭಿಮಾನಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತಾಲ್ಲೂಕಿನ ಶಿಂದೊಳ್ಳಿಯಲ್ಲಿ ನಡೆದಿದೆ.
ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಮೃತ. ಪುನೀತ್ ಸಾವಿನ ಸುದ್ದಿ ತಿಳಿದು ಅವರು ಆಘಾತಕ್ಕೆ ಒಳಗಾಗಿದ್ದರು.
ಕೂಲಿ ಮಾಡುತ್ತಿದ್ದ ಪರುಶರಾಮ, ಶಿವರಾಜ್‌ಕುಕುಮಾರ್ ಹಾಗೂ ಪುನೀತ್ ಅವರ ಅಪ್ಪಟ ಅಭಿಮಾನಿ ಆಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.