ಮೈಸೂರು,ಡಿ,16,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾರಂಜಿ ಕೆರೆ ಉತ್ಸವವನ್ನ ಆಯೋಜಿಸಲಾಗಿದೆ.
ಮೃಗಾಲಯ ಪ್ರಾಧಿಕಾರದಿಂದ ಮೈಸೂರಿನ ಕಾರಂಜಿ ಕರೆಯಲ್ಲಿ ಈ ವಿಶೇಷ ಹಬ್ಬ ನಡೆಯುತ್ತಿದ್ದು, ಮೈಸೂರು ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಕಾರಂಜಿಕೆರೆ ಉತ್ಸವಕ್ಕೆ ಚಾಲನೆ ನೀಡಿದರು. ಕಾರಂಜಿಕೆರೆ ಉತ್ಸವಕ್ಕೆ ಉತ್ಸವದಲ್ಲಿ ಕೆರೆಗಳು ಹಾಗೂ ವನ್ಯ ಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಉತ್ಸವ ಆಯೋಜನೆ ಮಾಡಲಾಗಿದೆ. ಕಾರಂಜಿ ಹಬ್ಬಕ್ಕೆ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಕಾರಂಜಿಕೆರೆ ಹಬ್ಬದಲ್ಲಿ ವನ್ಯ ಜೀವಿ ಛಾಯಚಿತ್ರ ಪ್ರದರ್ಶನ, ಛಾಯಾಗ್ರಹಣ ಸ್ಪರ್ಧೆ, ಬೀದಿ ನಾಟಕಗಳ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ. ಇನ್ನು ಕಾರಂಜಿಕೆರೆ ತಳಿರು ತೋರಣಗಳಿಂದ ಕಂಗೋಳಿಸುತ್ತಿದ್ದು, ಮೊದಲ ದಿನವೇ ಈ ಉತ್ಸವಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳ ದಂಡು ಹರಿದು ಬಂದಿದೆ.
key words: Karanjikere Festival- today – cultural city – Mysore