ಬೆಂಗಳೂರು, ಮಾರ್ಚ್ 05, 2023 (www.justkannada.in): ರಾಜ್ಯ ಸರಕಾರ ಇದೀಗ ಸರಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಸೌಲಭ್ಯ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಇತ್ತೀಚೆಗೆ 7ನೇ ವೇತನ ಆಯೋಗ ಶಿಫಾರಸ್ಸುಗಳನ್ನು ಜಾರಿ ಘೋಷಿಸಿದ್ದ ರಾಜ್ಯ ಸರಕಾರ ಇದೀಗ ಮತ್ತೊಂದು ಯೋಜನೆ ಜಾರಿ ಮಾಡಿದೆ.
ಈ ಯೋಜನೆಗೆ ಸರ್ಕಾರ 1250 ಕೋಟಿ ವೆಚ್ಚ ಪಡಿಸಿದೆ. ಯೋಜನೆ ಜಾರಿಯಾದ್ರೆ ನೌಕರರು ಹಾಗೂ ಕುಟುಂಬದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗಿದೆ.
ಈ ಯೋಜನೆ ಅಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅಲಂಬಿತರನ್ನ ಒಳಗೊಳ್ಳುತ್ತದೆ.