ಬೆಂಗಳೂರು,ಅ,19,2019(www.justkannada.in): ಇನ್ ಸ್ಟಾ ಗ್ರಾಮ್ ನಲ್ಲಿ ನಕಲಿ ಅಕೌಂಟ್ ಸೃಷ್ಠಿಸಿ ಸ್ನೇಹಿತೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಸಲ್ ಕೊಡು ಗ್ರಾಮದ ನಿತಿನ್ ಆಚಾರಿ ಬಂಧಿತ ಆರೋಪಿ. ಈತ ಬೆಂಗಳೂರಿನ ಬೆಳ್ಳಂದೂರಿನಲ್ಲಿ ವಾಸವಿದ್ದನು. ಆರೋಪಿ ನಿತಿನ್ ಆಚಾರಿ ಮತ್ತು ಈತನ ಸ್ನೇಹಿತೆ ಒಂದೇ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರು ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಈ ನಡುವೆ ಯುವತಿ ಆ ಕಂಪನಿ ಬಿಟ್ಟು ಬೇರೆ ಕಂಪನಿ ಸೇರಿದ್ದರು.
ಈ ವೇಳೆ ತನ್ನ ಸ್ನೇಹಿತೆ ಅಲ್ಲಿನ ಸಹದ್ಯೋಗಿ ಜತೆ ಇರುವುದನ್ನ ಸಹಿಸದ ಆರೋಪಿ ನಿತಿನ್ ಆಚಾರಿ ನಕಲಿ ಇನ್ ಸ್ಟಾಗ್ರಾಮ್ ಅಕೌಂಟ್ ಸೃಷ್ಠಿಸಿದ್ದನು. ನಂತರ ತನ್ನ ಸ್ನೇಹಿತೆಯ ಇನ್ ಸ್ಟಾಗ್ರಾಮ್ ನಿಂದ ಆಕೆಯ ಫೋಟೊ ಡೌನ್ ಲೋಡ್ ಮಾಡಿಕೊಂಡು ತಾನು ಸೃಷ್ಠಿಸಿದ್ದ ನಕಲಿ ಖಾತೆಗೆ ಅಪ್ಲೋಡ್ ಮಾಡುತ್ತಿದ್ದನು ಎನ್ನಲಾಗಿದೆ.
ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
Key words: Arrest- accused -creating – fake account – harassing -girl friend-bangalore