ಬೆಂಗಳೂರು,ಮೇ,27,2021(www.justkannada.in): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಮೇಶ್ ಜಾರಕಿಹೊಳಿಯನ್ನ ಬಂಧಿಸಬೇಕು. ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ಧಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರದ ರಕ್ಷಣೆ ಇದೆ. ಹೀಗಾಗಿ ರಮೇಶ್ ಜಾರಕಿಹೊಳಿಯನ್ನ ಬಂಧಿಸಿಲ್ಲ. ಎಸ್ ಐಟಿ ಮುಖ್ಯಸ್ಥರನ್ನ ರಜೆ ಮೇಲೆ ಕಳಿಸಿ ನಿಷ್ಕ್ರಿಯಗೊಳಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಹಿಂದಿನ ಶನಿವಾರ ರಮೇಶ್ ಜಾರಕಿಹೊಳಿ ಭೇಟಿ ಮಾಡಿ 2 ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಆರೋಪಿಯನ್ನ ರಕ್ಷಿಸುತ್ತಿದೆಯೆಂದು ತಿಳಿಯುತ್ತದೆ. ರೇಪ್ ಆರೋಪಿಯಿಂದ ಗೃಹಸಚಿವರ ಭೇಟಿ ಇದೇ ಮೊದಲು ಎಂದು ಟೀಕಿಸಿದರು.
ರಮೇಶ್ ಜಾರಕಿಹೊಳಿ ಮೆಡಿಕಲ್ ಟೆಸ್ಟ್ ಇನ್ನು ಆಗಿಲ್ಲ. ಕೇವಲ ಬಿಪಿ, ಶುಗರ್ ಟೆಸ್ಟ್ ಮಾಡಿಸಿದ್ದಾರೆ ಅಷ್ಟೆ. ಸರ್ಕಾರದ ರಕ್ಷಣೆ ಇರುವುದರಿಂದ ರಮೇಶ್ ಜಾರಕಿಹೊಳಿಯನ್ನ ಬಂಧಿಸುತ್ತಿಲ್ಲ. ಸಿಆರ್ ಪಿಸಿ 164ರಡಿ ರಮೇಶ್ ಜಾರಕಿಹೊಳಿಯನ್ನ ಬಂಧಿಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.
Key words: Arrest – accused- Ramesh jarakiholi-resigns -minister -Basavaraja Bommai- Siddaramaiah