ಮೈಸೂರು,ಆಗಸ್ಟ್,20,2022(www.justkannada.in): ಬ್ಯಾಂಕ್ ಗಳಲ್ಲಿ ಜನರೇಟರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳು ಮತ್ತು ಕದ್ದ ಮಾಲು ಸ್ವೀಕರಿಸುತ್ತಿದ್ದ ಓರ್ವ ಆರೋಪಿಯನ್ನ ನರಸಿಂಹರಾಜ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳುವು ಪ್ರಕರಣದಲ್ಲಿ ಆ.13 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಇವರುಗಳು ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆ, ಮೇಟಗಳ್ಳಿ ಪೊಲೀಸ್ ಠಾಣೆ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಕರ್ನಾಟಕ ಬ್ಯಾಂಕ್ ಕಛೇರಿಯ ಹೊರಗೆ ಅಳವಡಿಸಿದ್ದ ಜನರೇಟರ್ ಗಳನ್ನು ಕನ್ನಕಳವು ಮಾಡಿದ್ದರು.
ಹಾಗೆಯೇ ಇವರು ನೀಡಿದ ಮಾಹಿತಿಯ ಮೇರೆಗೆ ಆಗಸ್ಟ್ 17 ರಂದು ಕಳವು ಮಾಲುಗಳನ್ನು ಸ್ವೀಕರಿಸುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ 3,66,000/- ರೂ ಬೆಲೆಬಾಳುವ ಹೋಂಡಾ ಕಂಪನಿಯ 3 ಜನರೇಟರ್ ಗಳನ್ನು ಹಾಗೂ 2ನೇ ಆರೋಪಿಯ ಸ್ನೇಹಿತನಿಂದ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯ-01. ಮೇಟಗಳ್ಳಿ ಪೊಲೀಸ್ ಠಾಣೆಯ-01 ಕಳವು ಪ್ರಕರಣಗಳು ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿ ಟೌನ್ ಪೊಲೀಸ್ ಠಾಣೆಯ-01 ಕನ್ನಕಳವು ಪ್ರಕರಣಗಳು ಪತ್ತೆಯಾಗಿದೆ
ಮೈಸೂರು ನಗರ ಡಿಸಿಪಿ ಗೀತ ಎಂ.ಎಸ್ ಮತ್ತು ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ಪೊಲೀಸ್ ಇನ್ಸ್ ಪೆಕ್ಟರ್ ಅಜರುದ್ದೀನ್. ಪಿ.ಎಸ್.ಐ ಜೈಕೀರ್ತಿ, ಪಿ.ಎಸ್.ಐ ಗಂಗಾಧರ್, ಎಎಸ್ ಐ ರವಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ಮಹೇಶ, ಸುನೀಲ್ ಕುಮಾರ್, ದೊಡ್ಡಗೌಡ, ಈರೇಶ ಈ ಪತ್ತೆ ಕಾರ್ಯ ಮಾಡಿದ್ದಾರೆ.
Key words: Arrest – accused – stealing -generators – banks-mysore