ಬೆಂಗಳೂರು,ಸೆಪ್ಟಂಬರ್,16,2021(www.justkannada.in): ಬಾಡಿಗೆ ಮನೆಯಲ್ಲೇ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಾನ್ ಬಂಧಿತ ಆರೋಪಿ. ಈತ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದ. ಮನೆಯನ್ನೇ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿ ಮಾಡಿಕೊಂಡು ಡ್ರಗ್ಸ್ ತಯಾರು ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಎಸಿಪಿ ಹಾಗು ಪೊಲೀಸರು ಡ್ರಗ್ಸ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಎಂಡಿಎಂಎ ಕ್ರಿಸ್ಟಲ್ ಎಂಬ ಉತ್ತಮ ಕ್ವಾಲಿಟಿ ಡ್ರಗ್ಸ್ ತಯಾರಿಸುತ್ತಿದ್ದ ಎಂಬುದು ತಿಳಿದುಬಂದಿದ್ದು, ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಳಿ ಇದ್ಧ ಪಾಸ್ ಪೋರ್ಟ್, ಸುಮಾರು 5 ಕೋಟಿ ರೂ. ಮೌಲ್ಯದ ಎಂಡಿಎಂಎ, ಕ್ರಿಸ್ಟಲ್ ಮೆಥ್ನ ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ಌಸಿಡ್ ಮತ್ತು ಕೋಟ್ಯಂತರ ಮೌಲ್ಯದ ಕೆಮಿಕಲ್ ಜಪ್ತಿ ಮಾಡಿದ್ದಾರೆ. ಬಾಡಿಗೆ ಮನೆಯಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ. ಡ್ರಗ್ಸ್ ತಯಾರಿಸಿ ಬೆಂಗಳೂರು ನಗರದ ವಿವಿಧೆಡೆಗೆ ರವಾನೆ ಮಾಡುತ್ತಿದ್ದ. ಬೇರೆ ಬೇರೆ ರಾಜ್ಯ, ಇತರೆ ದೇಶಗಳಿಗೂ ಡ್ರಗ್ಸ್ ರವಾನೆ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಂಧಿತ ಆರೋಪಿ 5 ಕೆಮಿಕಲ್ ಬಳಸಿ ಡ್ರಗ್ಸ್ ತಯಾರು ಮಾಡುತ್ತಿದ್ದ. ನಗರದ ವಿವಿಧೆಡೆ ದೆಹಲಿ ಸೇರಿ ಹಲವು ಕಡೆಗೆ ಸಾಗಾಟ ಮಾಡುತ್ತಿದ್ದ. ಶೂ ಖರೀದಿಸಿ ಶೂ ನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇದೀಗ ಸಿಸಿಬಿ ಇಂದ ಒಳ್ಳೆಯ ಕಾರ್ಯಚರಣೆ ಅಗಿದೆ. ಈ ಹಿಂದೆ ಒಂದು ಡ್ರಗ್ಸ್ ಕೇಸ್ನಲ್ಲಿ ತನಿಖೆ ಮಾಡುವಾಗ ವಿದೇಶಿ ಪ್ರಜೆ ಅರೆಸ್ಟ್ ಮಾಡಲಾಗಿತ್ತು. ಆತನ ಮೊಬೈಲ್ ಹಾಗು ಆತನನ್ನು ಪರಿಶೀಲನೆ ಮಾಡಲಾಗಿತ್ತು. ಆಗ ಆತ ಬೇರೊಬ್ಬ ಪೆಡ್ಲರ್ ಬಳಿ ಸಂಪರ್ಕದಲ್ಲಿ ಇರುವುದು ಗೊತ್ತಾಗಿತ್ತು ಎಂದು ತಿಳಿಸಿದ್ದಾರೆ.
Key words: arrest- Bangalore-CCB police- accused -selling -drugs -home.