ಇನ್ನಷ್ಟು ಆಡಿಯೋ ಬಿಡುಗಡೆಯನ್ನ ತಡೆಯಲು ದೇವರಾಜೇಗೌಡರ ಬಂಧನ: ಸರ್ಕಾರದ ವಿರುದ್ದ ಸಿ.ಟಿ ರವಿ ಕಿಡಿ.

ಬೆಂಗಳೂರು,ಮೇ,11,2024 (www.justkannada.in):  ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಬಂಧನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಚಿವ ಸಿ.ಟಿ ರವಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಟಿ ರವಿ,   ಆಡಿಯೋ ರಿಲೀಸ್ ಆದ ಬಳಿಕ ದೇವರಾಜೇಗೌಡರನ್ನ ಬಂಧಿಸಿದ್ದಾರೆ ಇನ್ನಷ್ಟು ಆಡಿಯೋ ಬಹಿರಂಗವಾಗುವುದನ್ನ ತಡೆಯಲು ಬಂಧಿಸಿದ್ದಾರೆ.  ಪೂರ್ತಿ ಆಡಿಯೋ ಬಿಟ್ಟಿದ್ದರೇ ಸರ್ಕಾರ ಪತನ ಎಂದು ದೇವರಾಜೇಗೌಡ ಹೇಳಿದ್ದರು. 2ನೇ ಆಡಿಯಾ ಬಾಂಬ್ ನಂತರ ಬಂಧನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ಎಸ್ ಐಟಿ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ನವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಲಾಭ ಪಡೆಯಲು ಮುಂದಾಗಿದ್ದಾರೆ.  ಈ ಬಗ್ಗೆ ಶೀಘ್ರದಲ್ಲೇ ಗೊತ್ತಾಗುತ್ತೆ. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಜಡ್ಜ್ ರಿಂದ ತನಿಖೆಯಾಗಲಿ ಎಂದು ಸಿಟಿ ರವಿ ಆಗ್ರಹಿಸಿದರು.

Key words: Arrest -Devaraj Gowda-CT Ravi – against -Govt