ಕೊಡಗು,ಮಾರ್ಚ್,29,2025 (www.justkannada.in): ಕೊಡಗು ಜಿಲ್ಲೆಯ ಪೋನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಿನ್ನೆ ಒಂದೇ ಕುಟುಂಬದ ನಾಲ್ವರನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಗಿರೀಶ್ ಎಂಬಾತನೇ ಬಂಧಿತ ಆರೋಪಿ ಈತ ನಿನ್ನೆ ತನ್ನ ಪತ್ನಿ ನಾಗಿ(30) ಆಕೆಯ ಪುತ್ರಿ ಕಾವೇರಿ(5) ಪತ್ನಿಯ ತಾತ ಕರಿಯ(75) ಮತ್ತು ಅಜ್ಜಿ ಗೌರಿ(78) ಹತ್ಯೆಗೈದು ನಂತರ ಕೇರಳಕ್ಕೆ ಹೋಗಿ ತಲೆ ಮರೆಸಿಕೊಳ್ಳಲು ಯತ್ನಿಸಿದ್ದ. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಕೊಲೆ ಆರೋಪಿ ಗಿರೀಶ್ ಪತ್ನಿನಾಗಿಗೆ ಮೂರನೇ ಪತಿಯಾಗಿದ್ದ. ಕೊಲೆಯಾದ ಬಾಲಕಿ ಎರಡನೇ ಗಂಡನ ಮಗಳು. ಕಾರಣಾಂತರಗಳಿಂದ ಇಬ್ಬರು ಗಂಡರಿಂದ ದೂರ ಇದ್ದ ನಾಗಿ ವರ್ಷದ ಹಿಂದೆ ಕೇರಳ ಮೂಲದ ಗಿರಿಶ್ ಜೊತೆ ವಿವಾಹವಾಗಿದ್ದಳು. ಈ ಮಧ್ಯೆ ಎರಡು ತಿಂಗಳಿಂದ ತವರು ಮನೆಯಲ್ಲಿದ್ದಳು. ಕೌಟುಂಬಿಕ ಕಲಹ, ಅನೈತಿಕ ಸಂಬಂಧದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಡಿಕೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Accused, arrested, murdering, four members, kodagu