ಬೆಂಗಳೂರು,ಸೆಪ್ಟಂಬರ್,27,2022(www.justkannada.in) ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ,, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ದೇಶಾದ್ಯಂತ ಎನ್ ಐಎ ದಾಳಿ ನಡೆಸಿದ್ದ ವೇಳೆ ಪಿಎಫ್ ಐ ಪ್ರತಿರೋಧ ಒಡ್ಡಿತ್ತು. ಹೀಗಾಗಿ ಮುಂದಿನ ದಿನದಲ್ಲಿ ಶಾಂತಿ ಭಂಗ ಉಂಟುಮಾಡುವ ಸಾಧ್ಯತೆ ಇತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪಿಎಫ್ ಐ ಮುಖಂಡರನ್ನ ಬಂಧಿಸಲಾಗಿದೆ. ಬಂಧಿಸಿದವರನ್ನ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದರು.
ಎನ್ ಐಎ ದಾಳಿ ವೇಳೆ ಹಲವರಿಂದ ಆತಂಕ ಸೃಷ್ಟಿಗೆ ಯತ್ನ ನಡೆದಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದೆಂದು ಪಿಎಫ್ ಐ ಮುಖಂಡರ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದರು.
Key words: Arrest -PFI –leaders- Action -Home Minister- Araga jnanendra.