ಮೈಸೂರು,ಜೂನ್,1,2022(www.justkannada.in): ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಕಾರ್ಯಾಚರಣೆ ಬಂಧಿಸಿದ್ದಾರೆ.
ಲಕಾಂತನ ಹಾಡಿ ಗ್ರಾಮದ ರಾಜು, ರಮೇಶ್ ಬಂಧಿತ ಆರೋಪಿಗಳು. 6.450 ಕೆಜಿ ಶ್ರೀಗಂಧದ ತುಂಡುಗಳು, ಜೊತೆಗೆ ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆಯಲಾಗಿದೆ.
ಎಚ್.ಡಿ ಕೋಟೆ ತಾಲೂಕಿನ ಕಲ್ಲಹಳ್ಳ ಗ್ರಾಮದ ಬಳಿ ದ್ವಿಚಕ್ರ ವಾಹನದಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಮಾಹಿತಿ ಆಧಾರದ ಮೇಲೆ ಹ್ಯಾಂಡ್ ಪೋಸ್ಟ್ ಪ್ರಭಾರ ವಲಯ ಅರಣ್ಯಾಧಿಕಾರಿಗಳಾದ ನವೀನ್ ಕುಮಾರ್, ಅಶೋಕ ಚಿಕ್ಕಗಡೆರವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ದಾಸ, ಕುಮಾರ , ಶಿವು ಎಂಬ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಬಂಧಿತ ಅರೋಪಿಗಳು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ವಿಶೇಷ ಹುಲಿ ಸಂರಕ್ಷಣಾದಳ ಪ್ಲಟೂನ್ 02 ರ ಹ್ಯಾಂಡಪೋಸ್ಟ್ ಸಿಬ್ಬಂದಿ ಅರಣ್ಯರಕ್ಷಕರಾದ ಶ್ರೀಕಾಂತ್ , ಉಮೇಶ್, ಅರಣ್ಯ ವೀಕ್ಷಕ ಸೋಮೇಶ್, ಬಿ ಸಿ ಕಾಳ ಅರಣ್ಯ ವೀಕ್ಷಕ, ವಾಹನ ಚಾಲಕ ದಿನೇಶ್ ಭಾಗಿಯಾಗಿದ್ದರು.
Key words: Arrest – two -accused -illegally – sandalwood.