ಮೈಸೂರು,ಅಕ್ಟೋಬರ್,16,2021(www.justkannada.in): ಪುನುಕು ಬೆಕ್ಕು ಮತ್ತು ನರಿ ಜಾತಿ ವನ್ಯಪಾಣಿಯ ಚರ್ಮಗಳು ಹಾಗೂ ಎರಡು ಉಡಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಮೈಸೂರಿನ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಶಿಕಾರಿಪುರ ಗ್ರಾಮದ ಯಶವಂತ್ ರಾವ್ ಬಂಧಿತ ಆರೋಪಿ. ಬಂಧಿತನಿಂದ ನಾಲ್ಕು ನರಿ ಚರ್ಮವನ್ನು ಒಂದು ಪುನುಗುಬೆಕ್ಕಿನ ಚರ್ಮ ಹಾಗೂ ಎರಡು ಜೀವಂತ ಉಡಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮೈಸೂರು ಅರಣ್ಯ ಸಂಚಾರಿದಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಬಂದ ಖಚಿತ ಮಾಹಿತಿ ಮೇರೆಗೆ ಮೈಸೂರು ಆರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಶಿಕಾರಿಪುರ ಗ್ರಾಮದಿಂದ ಪಡುವಲಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ನಾಲ್ಕು ನರಿ ಚರ್ಮ ಒಂದು ಪುನುಗುಬೆಕ್ಕಿನ ಚರ್ಮ ಹಾಗೂ ಎರಡು ಜೀವಂತ ಉಡಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಯಶವಂತ್ ರಾವ್ ನನ್ನ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಅರಣ್ಯ ಮೊಕದ್ದಮೆ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Key words: Arrested – attempting – smuggle -animal skins –mysore forest staff