ನವದೆಹಲಿ,ಆ,5,2019(www.justkannada.in): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮಿ ಕಾಶ್ಮೀರ ವಿಚಾರದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನ ರದ್ದು ಮಾಡುವ ಮಸೂದೆಯನ್ನ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ಆರ್ಟಿಕಲ್ 370 ರದ್ದು ಹಿನ್ನೆಲೆ ಜಮ್ಮುಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಗುತ್ತದೆ. ಹಾಗೆಯೇ ಜಮ್ಮುಕಾಶ್ಮೀರಕ್ಕೆ ವಿಧಾನಸಭೆ ಇರಲಿದ್ದು, ಎಲ್ಲಾ ರಾಜ್ಯಗಳಂತೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದೆ. ಈ ಹಿಂದೆ 6 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿತ್ತು. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ ಮಸೂದೆಯಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಇನ್ನು ಜಮ್ಮು ಕಾಶ್ಮೀರದಿಂದ ಲಡಾಖ್ ಬೇರ್ಪಡಿಸಲು ನಿರ್ಧರಿಸಲಾಗಿದ್ದು ಲಡಾಖ್ ಸಹ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗಲಿದೆ.ಆದರೆ ಲಡಾಖ್ ಗೆ ವಿಧಾನಸಭೆ ಇರಲ್ಲ.
Key words: Article 370- repealed-union Territory -Status -Jammu and Kashmir.