ತುಮಕೂರು, ಅಕ್ಟೋಬರ್ 25, 2021 (www.justkannada.in): ಮಾಜಿ ಸಚಿವ ಸಿ ಚನ್ನಿಗಪ್ಪ ನವರ ಹಿರಿಯ ಪುತ್ರ ಡಿಸಿ ಅರುಣ್ ಕುಮಾರ್ ಕಾಂಗ್ರೆಸ್ ಸೇರುವುದಾಗಿ ಅಧಿಕೃತ ಘೋಷಣೆ ಮಾಡಿದರು
ಅವರು ಭಾನುವಾರ ಕೊರಟಗೆರೆ ತಾಲೋಕಿನ ಎಲೆ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಚೇನಹಳ್ಳಿ ಬಳಿಯಿರುವ ಆಂಜನೇಯ ಸ್ವಾಮಿ ದೇವರಲ್ಲಿ ಪೂಜೆ ಸಲ್ಲಿಸಿ ಮುಂದಿನ ತಮ್ಮ ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್ ಪಕ್ಷದಿಂದ ರೂಪಿಸಿಕೊಳ್ಳುವುದು ಎಂದು ತಿಳಿಸಿದರು.
ನಮ್ಮ ತಂದೆ ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿ ಕೊರಟಗೆರೆ ತಾಲೂಕಿನ ಮನೆ ಮಗನಾಗಿ ಜನರ ಸೇವೆ ಮಾಡುತ್ತಾ ಅವರು ಜನರ ಬೆಂಬಲದೊಂದಿಗೆ ಸಚಿವನಾಗಿ ಜನಪ್ರಿಯರಾಗಿದ್ದರು.
ಅಂತಹ ತಮ್ಮ ತಂದೆಯ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಲಾಗುವುದು ಎಂದು ಇಂಗಿತ ವ್ಯಕ್ತ ಪಡಿಸಿದರು.
ತಮಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಬರುವ ಆಸೆಯೂ ಇದ್ದು ಅವಕಾಶ ನೀಡುವುದಾದರೆ ಮಾಜಿ ಉಪಮುಖ್ಯಮಂತ್ರಿ ಗಳಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಮನೆಮನೆಗೆ ಹೋಗಿ ಗೆಲುವಿಗೆ ಶ್ರಮಿಸುವ ಜೊತೆಗೆ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಕೆ ಎನ್ ರಾಜಣ್ಣನವರ ಪುತ್ರ ರಾಜೇಂದ್ರ ಅವರಿಗೂ ಶ್ರಮಿಸುವುದಾಗಿ ತಿಳಿಸಿದರು.
ತಮ್ಮ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ತಮ್ಮ ಕುಟುಂಬದವರೆಲ್ಲರೂ ಸೇರಿ ಕುಳಿತು ನಿರ್ಧರಿಸಿದ್ದು ಅರುಣ್ ಕುಮಾರ್ ಹಾಗೂ ವೇಣುಗೋಪಾಲ್ ಇಬ್ಬರು ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಜೀವನ ಪ್ರಾರಂಭಿಸಲಿದ್ದು
ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ತಮ್ಮ ಹುಟ್ಟೂರಾದ ಬೈರನಾಯಕನಹಳ್ಳಿ ಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಪಕ್ಷದ ಮುಖಂಡರನ್ನು ಹಾಗೂ ತುಮಕೂರು ಜಿಲ್ಲೆಯ ಕಾರ್ಯಕರ್ತರನ್ನು ಮತ್ತು ಅಭಿಮಾನಿಗಳನ್ನು ಸೇರಿಸಿ ಬೃಹತ್ ಸಮಾವೇಶ ಮಾಡಿ ಅಧಿಕೃತ ಘೋಷಣೆ ಮಾಡುವುದಾಗಿ ತಿಳಿಸಿದರು.