ಬೆಂಗಳೂರು,ನವೆಂಬರ್,14,2020(www.justkannada.in): ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನ ನೇಮಕ ಮಾಡಲಾಗಿದೆ.
ಈ ಹಿಂದೆ ಕರ್ನಾಟಕ ಬಿಜೆಪಿಯ ಉಸ್ತುವಾರಿಯಾಗಿದ್ದ ಮುರಳೀಧರ ರಾವ್ ಗೆ ಮಧ್ಯಪ್ರದೇಶದ ಉಸ್ತುವಾರಿ ನೀಡಲಾಗಿದೆ. ಈ ಹಿಂದೆ ರಾಜಸ್ಥಾನದ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ಅವರನ್ನ ಕರ್ನಾಟಕ ಬಿಜೆಪಿ ಉಸ್ತುವಾರಿಯನ್ನಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೇಮಕ ಮಾಡಿದ್ದಾರೆ.
ಅರುಣ್ ಸಿಂಗ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಮಾಜಿ ಸಚಿವ ಸಿಟಿ ರವಿಗೆ ತಮಿಳುನಾಡು ಹಾಗೂ ಮಹಾರಾಷ್ಟ್ರದ ಉಸ್ತುವಾರಿ ನೀಡಲಾಗಿದೆ. ರಾಜ್ಯ ಸಚಿವರಾಗಿದ್ದ ಸಿಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಹೈಕಮಾಂಡ್ ಸಿಟಿ ರವಿ ಅವರಿಗೆ ಹಲವು ರಾಜ್ಯಗಳ ಮಹತ್ತರ ಉಸ್ತುವಾರಿ ನೀಡಿದೆ.
ತಮಿಳುನಾಡು ಉಸ್ತುವಾರಿ ನೇಮಕವಾಗುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯ ಜವಾಬ್ದಾರಿಯೂ ಕನ್ನಡಿಗ ಸಿಟಿ ರವಿ ಹೆಗಲಿಗೆ ಬಿದ್ದಿದೆ.
English summary…..
Arun Singh appointed as State BJP In-charge
Bengaluru, Nov. 14, 2020 (www.justannada.in): Sri Arun Singh has been appointed as the In-charge of Karnataka State BJP.
Muralidhar Rao, who was earlier the In-charge of Karnataka state BJP has been given the responsibility of Madhya Pradesh. Arun Singh was earlier the BJP In-charge of Rajasthan State. He has been given this responsibility by BJP National President J.P. Nadda.
Former minister C.T. Ravi has been provided the responsibility of working as In-charge of Tamil Nadu and Maharashtra.
Key words: Arun Singh –appointed- in-charge –karnataka-state BJP.