ಬೆಂಗಳೂರು:ಮೇ-27:(www.justkannada.in) ಕಲೆ, ಸಾಹಿತ್ಯ, ವಿಜ್ನಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 57 ಗಣ್ಯರು ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಮೇ 30 ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್. ರಾವ್ ತಿಳಿಸಿದ್ದಾರೆ.
* ವಿಜ್ಞಾನ ಮತ್ತು ತಂತ್ರಜ್ಞಾನ- ಡಿಆರ್ಡಿಒ ವಿಜ್ಞಾನಿ ಡಾ.ಎನ್. ಪ್ರಭಾಕರನ್
* ಬ್ಯಾಂಕಿಂಗ್- ರಾಜ್ಕಿರಣ್ ರೈ
* ಆಡಳಿತ ಮತ್ತು ಸಾಹಿತ್ಯ- ಡಾ.ಡಿ.ಸಿ. ರಾಜಪ್ಪ
* ಆಡಳಿತ- ಬಸಲಿಂಗಯ್ಯ ರುದ್ರಯ್ಯ ಹಿರೇಮಠ, ಜ್ಯೋತಿರ್ಲಿಂಗ ಚಂದ್ರಮ್ಮ ಹೊನ್ನಕಟ್ಟಿ
* ವೈದ್ಯಕೀಯ- ಪೊ›. ರೋಹಿತ್ ಶೆಟ್ಟಿ, ಡಾ. ವಿನೋದ್ ಜಿ. ಕುಲಕರ್ಣಿ, ಡಾ. ಉಮೇಶ್ ಪುತ್ರಾನ್
* ಲೆಕ್ಕ ಪರಿಶೋಧನೆ- ಸಿ.ಎ. ನರಸಿಂಹ ನಾಯಕ್
* ಆಡಳಿತ ಮತ್ತು ಶಿಷ್ಟಾಚಾರ- ಟಿ.ಎನ್. ಕನಕ ರಾಜು
* ಮಹಿಳಾ ಮತ್ತು ಯುವ ಸಬಲೀಕರಣ- ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ
* ಮಾಧ್ಯಮ- ಡಾ. ನಿರ್ಮಲಾ ಸಿ. ಯಲಿಗಾರ್,
* ಸಾಹಿತ್ಯ- ಪ್ರೊ. ಬೇಲೂರು ರಘುನಂದನ್
* ಚಲನಚಿತ್ರ- ಸುಧಾರಾಣಿ, ಸಾಧು ಕೋಕಿಲ, ಕೆ. ಕಲ್ಯಾಣ್
* ಸಂಗೀತ ಸಂಯೋಜನೆ- ಎಂ. ದಾಮೋದರ ಭಾಗವತ್ ಮುಲ್ಕಿ ಸೇರಿ 57 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಿವೃತ್ತ ನ್ಯಾ. ನಾಗಮೋಹನ್ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್. ರಾವ್ ಹಾಗೂ ಇತರ ಗಣ್ಯರು ಪಾಲ್ಗೊಳಲಿದ್ದಾರೆ.