ಮೈಸೂರು,ಜುಲೈ,1,2021(www.justkannada.in): ಆಶಾ ಕಾರ್ಯಕರ್ತೆಯರ ಜೀವ ಭದ್ರತೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಆಶಾಕಾರ್ಯಕರ್ತೆಯರು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿನ್ನೆ ಬನ್ನೂರಿನ ಬಿ ಸೀಹಳ್ಳಿಯಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಆಗಿದೆ ಎಂದು ಆರೋಪ ಕೇಳಿಬಂದಿದ್ದು, ಈ ಕುರಿತು ಸಿದ್ದರಾಜು ಎಂಬುವವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಸಂಬಂಧ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಿಗಿಸುವಂತೆ ಒತ್ತಾಯಿಸಿ ಇಂದು ಆಶಾಕಾರ್ಯಕರ್ತೆಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಟಿ.ನರಸೀಪುರ ತಾಲ್ಲೂಕಿನ ಬಿ ಸೀಹಳ್ಳಿ ಗ್ರಾಮದ ಸಿದ್ದರಾಜು ವಿರುದ್ಧ ಆಶಾ ಕಾರ್ಯಕರ್ತೆ ಮಂಜುಳ ಎಂಬಾಕೆ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಪಾಸಿಟಿವ್ ಬಂದ ಮಗುವನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾತರಿಸಲು ಸಿದ್ದರಾಜು ಮನೆಗೆ ಆಶಾ ಕಾರ್ಯಕರ್ತೆ ಮಂಜುಳ ತೆರಳಿದ್ದರು.
ಆದರೆ ಈ ವೇಳೆ ಕೋವಿಡ್ ಕೇರ್ ಸೆಂಟರ್ ಮಗು ದಾಖಲಿಸಲು ಸಿದ್ದರಾಜು ನಿರಾಕರಿಸಿದ್ದಾರೆ ಡಿಎಚ್ ಒ ಅವರ ಅದೇಶ ಆಗಿದೆ ಕೋವಿಡ್ ಸೆಂಟರ್ ಕಳುಹಿಸುವಂತೆ ಆಶಾ ಕಾರ್ಯಕರ್ತೆ ಮಂಜುಳ ಅವರು ಒತ್ತಾಯಿಸಿದ್ದು, ಇದರಿಂದ ಸಿದ್ಧರಾಜು ಕೊಪಗೊಂಡು ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಆರೋಪ ಮಾಡಲಾಗಿದೆ.
ಹೀಗಾಗಿ ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು. ಆಶಾ ಕಾರ್ಯಕರ್ತೆಯರಿಗೆ ಭದ್ರತೆ ಒದಗಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು.
Key words: Asha activists -appeals – provide- security-mysore-DC