ಮೈಸೂರು,ಅಕ್ಟೋಬರ್,5,2020(www.justkannada.in): ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆಶಾ ಕಾರ್ಯಕರ್ತೆ ಸಾವನ್ನಪ್ಪಿದ್ದು ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಶಾ ಕಾರ್ಯಕರ್ತೆ ಕುಟುಂಬಸ್ಥರು, ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ನಿವಾಸಿ ಪುಟ್ಟಮಣಿ(38)ಮೃತಪಟ್ಟ ಆಶಾ ಕಾರ್ಯಕರ್ತೆ. ಈ ನಡುವೆ ಕೆ.ಆರ್.ಆಸ್ಪತ್ರೆ ವೈದ್ಯ ಡಾ.ಮಹೇಶ್ ವಿರುದ್ದ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದ್ದು ವೈದ್ಯನ ವಿರುದ್ಧ ಕೆ.ಆರ್.ಆಸ್ಪತ್ರೆ ಶವಾಗಾರದ ಬಳಿ ಮೃತ ಆಶಾ ಕಾರ್ಯಕರ್ತೆ ಕುಟುಂಬಸ್ಥರು, ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಆಶಾ ಕಾರ್ಯಕರ್ತೆ ಪುಟ್ಟಮಣಿ(38) ಮೂಲವ್ಯಾಧಿ ಸಂಬಂಧ ಕಾಯಿಲೆಯಿಂದ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ವೈದ್ಯ ಮಹೇಶ್, ಪುಟ್ಟಮಣಿ ಅವರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುಂತೆ ಹೇಳಿದ್ದರು. ಆದರೆ ಆಶಾ ಕಾರ್ಯಕರ್ತೆಯ ಕುಟುಂಬಸ್ಥರು ಕೆ.ಆರ್.ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆ ಮಾಡುವಂತೆ ಒತ್ತಾಯಿಸಿದ್ದರು.
ನಂತರ ವೈದ್ಯ ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲ್ಲ ಎಂದು ಹೇಳಿ ಆಶಾ ಕಾರ್ಯಕರ್ತೆ ಪುಟ್ಟಮಣಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ಈ ಮಧ್ಯೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಪುಟ್ಟಮಣಿ ಅವರಿಗೆ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮತ್ತೆ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಶಾ ಕಾರ್ಯಕರ್ತೆ ಪುಟ್ಟಮಣಿ ಮೃತಪಟ್ಟಿದ್ದು, ವೈದ್ಯ ಮಹೇಶ್ ನಿರ್ಲಕ್ಷ್ಯದಿಂದ ಪುಟ್ಟಮಣಿ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ ಕೂಡಲೇ ವೈದ್ಯ ಮಹೇಶ್ ವಜಾ ಮಾಡಿ ಮೃತ ಆಶಾಕಾರ್ಯಕರ್ತೆಗೆ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Key words: Asha worker- death – negligence – doctor-portest- mysore-KR Hospital-Relatives