ಮೈಸೂರು,ಆಗಸ್ಟ್,6,2021(www.justkannada.in): ಇಂದು ಆಷಾಢ ಮಾಸದ ಕಡೆಯ ಶುಕ್ರವಾರ ಹಿನ್ನೆಲೆ ಮೈಸೂರು ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಚಾಮುಂಡಿ ತಾಯಿಗೆ ನೋಟುಗಳಿಂದ ವಿಶೇಷ ಲಕ್ಷ್ಮೀ ಅಲಂಕಾರ ಮಾಡುವ ಮೂಲಕ ಭಕ್ತರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಐದರಿಂದ ಐದು ನೂರು ರೂಪಾಯಿಯವರಗಿನ ವಿವಿಧ ನೋಟುಗಳಿಂದ ಮೂರ್ತಿಯನ್ನ ಅಲಂಕರಿಸಿ ಪೂಜಿಸಲಾಯಿತು. ಪ್ರಾತಃ ಕಾಲದಿಂದಲೇ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
10,20,50,100,,200 ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ಬಳಸಿ ದೇವಸ್ಥಾನದ ಅರ್ಚಕ ಪ್ರವೀಣ್ ಶಾಸ್ತ್ರಿ ಅವರು ಅಲಂಕಾರ ಮಾಡಿದ್ದರು. ಅರ್ಚಕ ಸಿಬ್ಬಂದಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು.
Key words: ashada-last-Friday –mysore-Special decoration – notes – mother Chamundeshwari