ಮೈಸೂರು.ಮೇ,18,2023(www.justkannada.in): ರಾಜ್ಯದಲ್ಲಿ ಕ್ಯಾಸಿನೊ ಶುರು ಮಾಡಿದ್ದೆ ಬಿಜೆಪಿಗರು. ಮೈಸೂರಿನಲ್ಲಿ ಕ್ಯಾಸಿನೊ ತಂದಿದ್ದೆ ಅಶ್ವಥ್ ನಾರಾಯಣ್. ನಾನು ಇದನ್ನ ನೇರವಾಗಿಯೇ ಹೇಳುತ್ತೇನೆ. ಹೀಗಾಗಿ ಪಬ್, ಹುಕ್ಕಬಾರ್ ಜೂಜು ಅಡ್ಡೆಗಳನ್ನ ಮುಚ್ಚಿಸಿಯೇ ತೀರುತ್ತೇನೆ ಎಂದು ಚಾಮರಾಜ ಕ್ಷೇತ್ರದ ನೂತನ ಶಾಸಕ ಹರೀಶ್ ಗೌಡ ಶಪಥ ಮಾಡಿದರು.
ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹರೀಶ್ ಗೌಡ, ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ನನ್ನ ಕ್ಷೇತ್ರದ ಜನರ ಅಲ್ಲದೇ ವಿವಿಧ ಭಾಗದ ಜನರೂ ನನಗೆ ಬೆಂಬಲ ಸೂಚಿಸಿದ್ದಾರೆ. ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ಖರ್ಗೆ ಅವರಿಗೆ ಧನ್ಯವಾದ. ನನ್ನ ಗೆಲುವನ್ನ ಈ ಮೂವರಿಗೆ ಅರ್ಪಿಸುತ್ತೇನೆ. ನನಗೆ ೨೦-೨೫ ದಿನ ಮಾತ್ರ ಅವಕಾಶ ಇತ್ತು. ಎಲ್ಲರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನಾನು ಶಾಸಕನಾದ ನಂತರ ಏನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅದನ್ನು ಮಾಡಿಯೇ ತೀರುತ್ತೇನೆ ಎಂದರು
ಆಶ್ರಯ ಮನೆಗಳನ್ನ 20 ವರ್ಷಗಳಿಂದ ನೀಡಿಲ್ಲ. ಅವುಗಳನ್ನು ನೀಡಲು ನಾನು ಕಟುಬದ್ದನಾಗಿ ಇರುತ್ತೆನೆ. ನನ್ನೆ ಎಲ್ಲಾ ವಾಗ್ದಾನಗಳನ್ನು ನಾನು ಈಡೇರಿಸಿಯೇ ತೀರುತ್ತೇನೆ. ಎಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕಕರು ನನಗೆ ಬೆಂಬಲ ಸೂಚಿಸಿದ್ದಾರೆ. ನಾನು ಯಾರ ಹೇಳಿಕೆಗೂ ಕೌಂಟರ್ ಕೊಡಲು ಬಂದಿಲ್ಲ ಎಂದು ಹರೀಶ್ ಗೌಡ ತಿಳಿಸಿದರು.
ಹುಕ್ಕ ಬಾರ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಗರ ಕೆಲವು ಭಾಗಗಳಲ್ಲಿ ಅದು ಇದೆ. ಮೈಸೂರು ನಗರದಲ್ಲಿ ಮೂರರಿಂದ ನಾಲ್ಕು ಭಾಗದಲ್ಲಿ ಕ್ಯಾಸಿನೋ ನಡೆಯುತ್ತಿದೆ. ಬಿಜೆಪಿಯವರು ಕ್ಯಾಸಿನೋ ಪರಂಪರೆಯನ್ನ ಬೆಳೆಸುತ್ತಿದ್ದಾರೆ. ರಾಜ್ಯದಲ್ಲಿ ಅಶ್ವತ್ ನಾರಾಯಣ್ ಕ್ಯಾಸಿನೋ ನಡೆಸುತ್ತಿದ್ದಾರೆ.
ಅವರೇ ನನಗೆ ಕಾಲ್ ಮಾಡಿದ್ರು ನನ್ನ ಕುಟುಂಬದ ಸದಸ್ಯ ಕೆಸಿನೋ ನಡೆಸುತ್ತಿದ್ದಾರೆ ತೊಂದರೆ ಕೊಡಬೇಡ ಅಂತ. ನಾನು ಇದನ್ನ ನೇರವಾಗಿಯೇ ಹೇಳುತ್ತೇನೆ. ನನಗೆ ಕರೆ ಮಾಡಿ ತೊಂದರೆ ಕೊಡಬೇಡ ನೀನು ಎಂದಿದ್ದರು. ನಾನು ಆ ವೇಳೆ ನಮ್ಮ ಮಕ್ಕಳು ಹಾಳಾಗ್ತಾರೆ ಫೋನ್ ಇಡಿ ಅಂತ ಹೇಳಿದ್ದೆ. ಆ ವೇಳೆಯೇ ಅಂದಿನ ಪೊಲೀಸ್ ಆಯುಕ್ತರ ಗಮನಕ್ಕೂ ತಂದಿದ್ದೆ. ಆ ವೇಳೆ ಕ್ಯಾಸಿನೊ ಬಂದ್ ಮಾಡಿಸೋ ಕೆಲಸ ಆಗಿತ್ತು. ಆ ವೇಳೆ ಇದ್ದದ್ದು ಇದೇ ಬಿಜೆಪಿ ಸರ್ಕಾರ ಬಿಜೆಪಿ ಶಾಸಕರೇ. ಈವಾಗ ಏನೇನೋ ಹತಾಶೆಯ ಮಾತುಗಳನ್ನ ಜನ ನಂಬಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಕಳೆದು ಐದು ವರ್ಷದಲ್ಲಿ ಜೂಜು ಅಡ್ಡೆಗಳು ಹೆಚ್ಚಾಗಿದೆ. ಖಂಡಿತವಾಗಿಯೂ ನಾನು ಇವುಗಳನ್ನ ಮುಚ್ಚಿಸಲು ಕೆಲಸ ಮಾಡಿಯೇ ತೀರುತ್ತೇನೆ. ನನ್ನ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಭದ್ರಕೋಟೆ. ಇಲ್ಲಿ ಗೆದ್ರೆ ಕಾಂಗ್ರೆಸ್ ಜೆಡಿಎಸ್ ಮಾತ್ರ ಗೆಲ್ಲಬೇಕಿತ್ತು. ಕಳೆದ ಬಾರಿಯ ಗೊಂದಲದಿಂದ ಬಿಜೆಪಿ ಗೆದ್ದಿತ್ತು. ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ. ನಾನು ಪಕ್ಷ ನೀಡಿದ ಹಣದಲ್ಲಿ ಚುನಾವಣೆ ಮಾಡಿದ್ದೇನೆ. ಯಾವ ಪಬ್, ಬಾರ್ ಹುಕ್ಕ ಬಾರ್, ಜೂಜು ಅಡ್ಡೆಗಳನ್ನ ನೂರಕ್ಕೆ ನೂರು ಮುಚ್ಚಿಸುತ್ತೇನೆ. ಮೂರು ಪಕ್ಷದ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ. ಎಲ್ಲರೂ ನನಗೆ ಬೆಂಬಲವಾಗಿ ನಿಂತರು. ಎಲ್ಲ ಪಕ್ಷದಿಂದಲೂ ಮತ ಹಾಕಿ ನನ್ನನ್ನು ಗೆಲ್ಲಿಸುವ ಕೆಲಸ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Key words: Ashwath Narayan – casino – Mysore – New MLA -Harish Gowda