ಬೆಂಗಳೂರು, ನವೆಂಬರ್ 15, 2019 (www.justkannada.in): ಭಾರತದ ಹಿರಿಯ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆಯುತ್ತಿದ್ದಂತೆ ಅಶ್ವಿನ್ ಭಾರತದಲ್ಲಿ 250 ವಿಕೆಟ್ ಪೂರ್ಣಗೊಳಿಸಿದರು. ಅಲ್ಲದೆ ವೇಗವಾಗಿ ಈ ಸಾಧನೆ ಮಾಡಿದ ದಾಖಲೆಯನ್ನು ಮುತ್ತಯ್ಯ ಮುರುಳೀದರನ್ ಜೊತೆ ಹಂಚಿಕೊಂಡರು.
ಮುತ್ತಯ್ಯ ಮುರುಳೀಧರನ್ ತವರಿನಲ್ಲಿ 250 ವಿಕೆಟ್ ಪಡೆಯಲು 42 ಪಂದ್ಯಗಳನ್ನಾಡಿದ್ದರು. ಆಶ್ವಿನ್ ಸಹ ಅಷ್ಟೇ ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.