ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ- ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ಬೆಂಗಳೂರು,ಫೆಬ್ರವರಿ,15,2025 (www.justkannada.in):  ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಡಿದ  ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಮೆಟ್ರೋ ಜವಾಬ್ದಾರಿ ರಾಜ್ಯ ಸರ್ಕಾರದ್ದು. ನಾವು ದರ ಏರಿಕೆ ಮಾಡಿದ್ದೇವೆ ಎನ್ನುವುದು ತಪ್ಪು.  ಮೆಟ್ರೋ  ದರ ಏರಿಕೆ ಸಮಿತಿ ಇರುವುದು ದೆಹಲಿಯಲ್ಲಿ ಅಲ್ಲ.  ಕರ್ನಾಟಕದಲ್ಲಿ ಎಂದರು.

ಇದು ಕರ್ನಾಟಕ ಮಾತ್ರ ಅಲ್ಲ. , ಚೆನ್ನೈ, ದೆಹಲಿ, ಹೈದರಾಬಾದ್‌, ಮುಂಬೈಗಳಲ್ಲೂ ಇದೇ ರೀತಿಯಾಗಿದೆ. ಮೆಟ್ರೋ ಯೋಜನೆಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತವೆ. ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ ಎಂದರು

ಮೆಟ್ರೋ‌ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ನೀಡಿದ್ದೇ ರಾಜ್ಯ ಸರ್ಕಾರ. ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ದರ ಏರಿಕೆಗೆ ಸೂಚನೆ ನೀಡಿಲ್ಲ. ಇದು ತಪ್ಪು ಆರೋಪ ಎಂದು ಹೇಳಿದರು.

Key words: State government, responsible, metro fare,  hike – Union Minister,  Ashwini Vaishnav