ಆಡಳಿತ ಪಕ್ಷಕ್ಕೆ ಸೋಲುಣಿಸುವ ಪರಂಪರೆ ಮುಂದುವರೆಸಿದ ಮತದಾರ.

ಬೆಂಗಳೂರು,ಮೇ,13,2023(www.justkannada.in): ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಸೋತು ಮಕಾಡೆ ಮಲಗಿದೆ. ಪ್ರತಿ ಪಕ್ಷ ಕಾಂಗ್ರೆಸ್  ಕಮಲ ಪಕ್ಷದ ವಿರುದ್ಧ ಬಿರುಗಾಳಿಯಂತೆ ಎದ್ದಿದ್ದ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಮರಳಿ ಅಧಿಕಾಕ್ಕೆ ಬಂದಿದೆ.

ರಾಜ್ಯದ ಮತದಾರರು ಪ್ರಧಾನಿ ನರೇಂದ್ರ ಮೋದಿ ಯವರ “ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ” ಎಂಬ ಮನವಿಯನ್ನು ತಿರಸ್ಕರಿಸಿ, ಅವರು ಕಾಂಗ್ರೆಸ್ ವಿರುದ್ಧ ಮಾಡಿದ್ದ ಎಲ್ಲಾ ಟೀಕಾಪ್ರಹಾರಗಳನ್ನೂ ಧಿಕ್ಕರಿಸಿ ’ಕೈ’ ಪಕ್ಷಕ್ಕೆ ನಮ್ಮ ಬೆಂಬಲ ಈ ಬಾರಿ ಎಂದು ಘೋಷಿಸಿದ್ದಾರೆ.

ಬಿಜೆಪಿಯ ಲಿಂಗಾಯತ, ಭಜರಂಗಿ, ಧರ್ಮ ದಂಗಲ್ ಗಳೂ ಕಮಲ ಪಕ್ಷದ ಮತ ನೆರೆವಿಗೆ ಬರಲಿಲ್ಲ. ಪ್ರಧಾನ ಮಂತ್ರಿ ಓರ್ವರು, ಈ ಮಟ್ಟದಲ್ಲಿ ಧರ್ಮದ ವಿಷಯಗಳ ಆಧಾರದಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಲು ಶ್ರಮಿಸಿದ್ದು ಬಹುಶಃ ಇದೇ ಪ್ರಥಮ.

ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ಮೂಲಕ ಕರ್ನಾಟಕದ ಮತದಾರರು ಅಡಳಿತ ಪಕ್ಷವನ್ನು ಸೋಲಿಸುವ 38 ವರ್ಷಗಳ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

1985 ರಲ್ಲಿ ರಾಮಕೃಷ್ಣ ಹೆಗಡೆ ಜನತಾ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದ ನಿದರ್ಶನ ಬಿಟ್ಟರೆ, ನಂತರದ ಎಲ್ಲಾ ಚುನಾವಣೆಗಳಲ್ಲಿ, ಆಡಳಿತಾರೂಢ ಪಕ್ಷ ಅಧಿಕಾರ ಉಳಿಸಿಕೊಂಡ ಉದಾಹರಣೆಯೇ ಇಲ್ಲ.

M.SIDDARAJU, SENIOR JOURNALIST

 

ಎಂ.ಸಿದ‍್ಧರಾಜು

ಹಿರಿಯ ಪತ್ರಕರ್ತರು,

ಬೆಂಗಳೂರು.

 

Key words: assembly-election-congress-bjp-jds