ಮೈಸೂರು,ಮೇ,13,2023(www.justkannada.in): ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಈ ಚುನಾವಣೆಯಲ್ಲಿ ಮತದಾರ ಬಹು ದೊಡ್ಡ ಶಾಕ್ ನೀಡಿದ್ದಾನೆ. 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ರಾಜ್ಯವನ್ನಾಳುವ ಕನಸು ಕಾಣುತ್ತಿದ್ದ ಪಕ್ಷಕ್ಕೆ ಫಲಿತಾಂಶ ಅಘಾತ ತಂದಿದೆ.
ಹಳೆ ಮೈಸೂರು ಭಾಗದಿಂದ ತನ್ನ ರಾಜಕೀಯ ಅಸ್ಥಿತ್ವ ಕಂಡುಕೊಂಡು, ಅತಂತ್ರ ವಿಧಾನ ಸಭೆ ನಿರ್ಮಾಣವಾದಗಲೆಲ್ಲಾ ಕಿಂಗ್ ಮೆಕರ್ ಆಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೊಡನೆ ಅಧಿಕಾರ ಹಂಚಿಕೊಂಡು ಅನುಭವಿಸಿದ ಗೌಡರ ಜಾತ್ಯಾತೀತ ಪಕ್ಷ ಈ ಚುನಾವಣೆಯಲ್ಲಿ 25 ಸೀಟುಗಳನ್ನು ಗೆಲ್ಲುವುದು ಕಷ್ಟ ಎಂದು ತೋರುತ್ತಿದೆ ಮತ ಎಣಿಕೆಯ ಟ್ರೆಂಡ್.
2008 ರಲ್ಲಿ ಒಮ್ಮೆ ಮಾತ್ರ ಜೆಡಿಎಸ್ 24 ಸ್ಥಾನಕ್ಕೆ ಇಳಿದ್ದಿದ್ದನ್ನು ಬಿಟ್ಟರೆ, ಎಲ್ಲಾ ಚುನಾವಣೆಗಳಲ್ಲಿ 30 ರ ಗಡಿ ದಾಟಿದೆ. ಇದಕ್ಕೆ ಕಾರಣ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಜೆಡಿಎಸ್ ಅನ್ನು ಹಳೆ ಮೈಸೂರು ಜಿಲ್ಲೆಗಳಲ್ಲಿ ಕೈ ಹಿಡಿದ ಕಾರಣ.
ಈ ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಕಾಂಗ್ರೆಸ್, ಜೆಡಿಎಸ್ ನಡುವೆ ಹಂಚಿ ಹೋಗಿವೆ ಅನಿಸುತ್ತದೆ. ಇದಕ್ಕೆ ಕಾರಣ ಒಕ್ಕಲಿಗ ಸಮುದಾಯದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕಾರ್ಯ ತಂತ್ರ ಎಂದು ವಿಶ್ಲೇಷಕವಾಗಿದೆ. ಡಿ.ಕೆ ಶಿವಕುಮಾರ್ ರವರು ನನಗೂ ಮುಖ್ಯಮಂತ್ರಿಯಾಗುವ ಅವಕಾಶವಿದೆ, ಕಾಂಗ್ರೆಸ್ ಬೆಂಬಲಿಸಿ ಎಂದು ಒಕ್ಕಲಿಗ ಮತದಾರರಿಗೆ ಮಾಡಿದ ಮನವಿ ಫಲ ನೀಡಿದಂತಿದೆ.
ಎಂ.ಸಿದ‍್ಧರಾಜು.
ಹಿರಿಯ ಪತ್ರಕರ್ತರು
ಬೆಂಗಳೂರು.
Key words: assembly-election-JDS -lost – supremacy – Old- Mysore