ವಿಶ್ವಾಸಮತಯಾಚನೆಗೂ ಮುನ್ನ ರಾಜೀನಾಮೆ ಬಗ್ಗೆ ತೀರ್ಮಾನಿಸಿ- ವಿಧಾನಸಭೆಯಲ್ಲಿ ಸಚಿವ ಕೃಷ್ಣೇಭೈರೇಗೌಡ ಮನವಿ….

ಬೆಂಗಳೂರು,ಜು,18,2019(www.justkannada.in): ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ಸದನದ ಸದಸ್ಯರೋ ಅಥವಾ ಅಲ್ಲವೂ ಎಂಬ ಗೊಂದಲ ಸೃಷ್ಠಿಯಾಗಿದೆ. ಹೀಗಾಗಿ ವಿಶ್ವಾಸಮತಯಾಚನೆಗೂ ಮುನ್ನ ರಾಜೀನಾಮೆ ಬಗ್ಗೆ ತೀರ್ಮಾನಿಸಿ ಎಂದು ಸ್ಪೀಕರ್ ಗೆ ಸಚಿವ ಕೃಷ್ಣೇಭೈರೇಗೌಡ ಮನವಿ ಮಾಡಿದರು.

ವಿಧಾನಸಭೆ ಕಲಾಪದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಪ್ರಸ್ತಾವ ಮಂಡಿಸಿ ಮಾತನಾಡುವ ವೇಳೇ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿ ಮಾತನಾಡಿದರು. ಬಳಿಕ ಮಾತನಾಡಿದ ಕೃಷ್ಣೇಭೈರೇಗೌಡರು, ಸಿದ್ದರಾಮಯ್ಯ ಕ್ರಿಯಾಲೋಪ ಮುಂದುವರೆಸುತ್ತೇನೆ. ಕ್ರಿಯಾಲೋಪದ ಬಗ್ಗೆಸಂಕ್ಷೀಪ್ತವಾಗಿ ಹೇಳುತ್ತೇನೆ.  ಸುಪ್ರೀಂಕೋರ್ಟ್ ಆದೇಶದಿಂದ ಗೊಂದಲ ಸೃಷ್ಠಿಯಾಗಿದೆ. 15 ಶಾಸಕರು ಸದನದ ಸದಸ್ಯರೋ ಅಲ್ಲವೂ ಎಂದು ಗೊಂದಲ ಸೃಷ್ಠಿಯಾಗಿದೆ ಹೀಗಾಗಿ ವಿಶ್ವಾಸಮತಕ್ಕೂ ಮುನ್ನ ಅವರು ಸದನದ ಸದಸ್ಯರೋ ಅಲ್ಲವೂ ಎಂಬುದನ್ನ ನಿರ್ಧರಿಸಿ ಎಂದು ಮನವಿ ಮಾಡಿದರು.

ಹಾಗೆಯೇ ಅದನ್ನ ನಿರ್ಧರಿಸದೆ ವಿಶ್ವಾಸಮತಯಾಚನೆ ಸರಿಯಲ್ಲ. ತ್ರಿಶಂಕು ಸ್ಥಿತಿಯಲ್ಲಿ  ನಿರ್ಧಾರ ಮಾಡುವುದು ಸರಿಯಲ್ಲ. ವಿಶ್ವಾಸಮತಯಾಚನೆಗೂ ಮುನ್ನ ರಾಜೀನಾಮೆ ಬಗ್ಗೆ ತೀರ್ಮಾನಿಸಿ ಎಂದರು.

Key words: assembly-  Minister- Krishnabhairaigowda -appeals -speaker