ಮೈಸೂರು,ನ,19,2019(www.justkannada.in): ಹುಣಸೂರಿನ ಬಿಳಿಗೆರೆಯಲ್ಲಿ ಇಬ್ಬರ ಮೇಲೆ ಹಲ್ಲೆ ವಿಚಾರ ಸಂಬಂಧ ನನ್ನ ವಿರುದ್ದ ಅಪಪ್ರಚಾರ ಮಾಡಲು ಯತ್ನ ನಡೆಸಲಾಗುತ್ತಿದೆ. ದಯವಿಟ್ಟು ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಮನವಿ ಮಾಡಿದ್ದಾರೆ.
ಹುಣಸೂರು ತಾಲ್ಲೂಕಿನ ಬಿಳಿಗೆರೆಯಲ್ಲಿ ನಿನ್ನೆ ರಾತ್ರಿ ಮತಯಾಚನೆ ವೇಳೆ ಹೆಚ್.ಪಿ ಮಂಜುನಾಥ್ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್, ಜನ್ರಿಗೆ ತಪ್ಪು ಸಂದೇಶ ರವಾನೆ ಮಾಡ್ತಿದ್ದಾರೆ. ಕಳೆದ ಚುನಾವಣೆಯಲ್ಲು ಈ ರೀತಿ ಅಪಪ್ರಚಾರ ಮಾಡಿದ್ರು. ಈ ಬಾರಿಯು ಆ ಕೆಲಸ ನಡೆಯುತ್ತಿದೆ. ಆ ಘಟನೆ ನಡೆದಾಗ ನಾನು ಸ್ಥಳದಲ್ಲೇ ಇರಲಿಲ್ಲ. ಜೆಟ್ಪಿ ಮಂಜುನಾಥ್ ಬದಲು ಹೆಚ್.ಪಿ ಮಂಜುನಾಥ್ ಅಂತ ಬಿಂಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲ್ಲೆಗೊಳಗಾದ ವ್ಯಕ್ತಿಯು ನಮ್ಮ ಪಕ್ಷದ ಬೂತ್ ಕಮಿಟಿ ಸದಸ್ಯ. ಅವರ ಕುಟುಂಬದ ಕಲಹ ನಿನ್ನೆ ನಾನು ಹೋದ ಸಂದರ್ಭದಲ್ಲಿ ದೊಡ್ಡದಾಗಿದೆ. ನಾನು ಚುನಾವಣೆ ಮುಗಿದ ಬಳಿಕ ನಿನ್ನ ಆಶ್ವಾಸನೆ ಈಡೆರಿಸುತ್ತೇನೆ ಎಂದಿದ್ದೆ. ನಾನು ಅಲ್ಲಿಂದ ಬಂದ ನಂತರದಲ್ಲಿ ಘಟನೆ ನಡೆದಿದೆ. ಆದರೆ ಇದನ್ನ ಕೆಲವರು ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ತಾಲೂಕಿನ ಜನರಿಗೆ ಮತದಾರರಿಗೆ ಮನವಿ ಮಾಡ್ತೇನೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಹೆಚ.ಪಿ ಮಂಜುನಾಥ್ ಮನವಿ ಮಾಡಿದರು.
ಹಾಗೆಯೇ ಕೆಲ ಮಾಧ್ಯಮದವರು ಸತ್ಯಾಸತ್ಯತೆ ಅರಿತು ಸುದ್ದಿ ಮಾಡಿ. ಈ ಬಗ್ಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ಹೆಚ್.ಪಿ ಮಂಜುನಾಥ್ ತಿಳಿಸಿದರು.
Key words: assult case-hunsur- congress candidate- HP Manjunath – pleaded