ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ: ರಕ್ಷಣೆಗಾಗಿ ಮನವಿ

ಮೈಸೂರು,ಮಾರ್ಚ್,22,2025 (www.justkannada.in): ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ ಗಂಡನ ಪ್ರೈವೇಟ್ ಪಾರ್ಟ್ ಗೆ ಒದ್ದು ದೌರ್ಜನ್ಯ ನಡೆಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯ ಕಗ್ಗಲೂರು ಗ್ರಾಮದಲ್ಲಿ ನಡೆದಿದೆ.

ಮಲ್ಲೇಶ್ ಹಾಗೂ ಸವಿತಾ ದಂಪತಿ ಹಲ್ಲೆಗೆ ಒಳಗಾದವರು. ಮೇಲ್ವರ್ಗದ ಗುಂಪು ಹಲ್ಲೆ ನಡೆಸಿದೆ ಎಂದು ದಂಪತಿ ದೂರಿನಲ್ಲಿ ತಿಳಿಸಿದ್ದಾರೆ. ಯೋಗೇಶ್, ಬಿಂದು, ಗುರು, ಅಶೋಕ್, ಉಮಾ, ಮಲ್ಲಹಳ್ಳಿ ರತ್ನ ಶಿವಮೂರ್ತಿ, ಮಲ್ಲಣ್ಣ, ಅನಿಲ್, ಚರಣ್, ಮಂಜು ಹಾಗೂ ಇತರರು ಹಲ್ಲೆ ನಡೆಸಿದವರು.

ಮಲ್ಲೇಶ್ ಹಾಗೂ ಸವಿತ ದಂಪತಿ ಮಗ ಮಲ್ಲಿಕಾರ್ಜುನ ಹಣಕ್ಕಾಗಿ ಪಕ್ಕದ ಬೀದಿಯಲ್ಲಿರುವ ಮನೆಗೆ ಹೋಗಿದ್ದಾರೆ. ಆಗ ಈ ಬೀದಿಗೆ ಏಕೆ ಬಂದೆ ಎಂದು ಯೋಗೇಶ್ ಪ್ರಶ್ನಿಸಿ ಹುಡುಗನಿಗೆ ಬೈದಿದ್ದಾನೆ. ಈ ಬಗ್ಗೆ ಸವಿತಾ ವಿರೋಧಿಸಿದಾಗ ಮನೆಗೆ ನುಗ್ಗಿ ಹೊಡೆದಿದ್ದಾರೆ. ನಂತರ ರಾತ್ರಿ ಗಂಡ ಮಲ್ಲೇಶ್ ಬಂದ ಸುಮಾರು 20 ಜನರ ಗುಂಪು ಮನೆಗೆ ನುಗ್ಗಿ ಮಲ್ಲೇಶ್ ಪ್ರೈವೇಟ್ ಪಾರ್ಟ್ ಗೆ ಒದ್ದು ದೊಣ್ಣೆಯಿಂದ ತಲೆಗೆ ಹೊಡೆದು ದೌರ್ಜನ್ಯ ನಡೆಸಿದ್ದಾರೆ.

ಮೇಲ್ವರ್ಗದ ಜನತೆ ನಡೆಸಿದ ದೌರ್ಜನ್ಯಕ್ಕೆ ಕೆಳವರ್ಗದ ದಂಪತಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ಕೆಳವರ್ಗದ ನಾವು ಕೇವಲ ಐದಾರು ಕುಟುಂಬಗಳಿವೆ. ಹೆದರಿಕೆಯಲ್ಲೇ ಜೀವನ ಸಾಗಿಸುತ್ತಿದ್ದೇವೆ. ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡುವಂತೆ ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Key words: mysore, assult, Couple, protection