ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಖಗೋಳ ಭೌತಶಾಸ್ತ್ರ ತಾರಾ ವೀಕ್ಷಣಾಲಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಡಿಸೆಂಬರ್,10,2021(www.justkannada.in): ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಖಗೋಳ ಭೌತಶಾಸ್ತ್ರಕ್ಕೆ ಸಂಬಂಧಪಟ್ಟ ತಾರಾ ವೀಕ್ಷಣಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ  ಭವನದಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ವತಿಯಿಂದ ಒಡಂಬಡಿಕೆ ಸಹಿ ಕಾರ್ಯಕ್ರಮ ಮತ್ತು ಬಾಹ್ಯ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ಲ್ಯಾನಿಟೋರಿಯಂ ಅನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ 3 ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಾಜಾಧಾನಿ ಬೆಂಗಳೂರಿನಲ್ಲಿ ಈಗಾಗಲೇ ಒಂದು ತಾರಾ ವೀಕ್ಷಣಾಲಯ ಇದೆ. ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಯೋಗದೊಂದಿಗೆ ಮೈಸೂರಿನಲ್ಲೂ ಪ್ಲ್ಯಾನಿಟೋರಿಯಂ ನಿರ್ಮಾಣ‌ ಮಾಡಲಾಗುತ್ತದೆ ಎಂದರು.

ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ನಾನಾ ಸಂಶೋಧನೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಉತ್ಸುಕತೆಯಿಂದ ಖಗೋಳಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ‌ ಹಾಗಾಗಿ ಈ ತಾರಾ ವೀಕ್ಷಣಾಲಯ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ವರದಾನವಾಗಲಿದೆ. ಮುಂದಿನ ತಿಂಗಳು ಭೂಮಿ ಪೂಜೆ ನಡೆಯಲಿದೆ. ವಿಜ್ಞಾನ ಭವನದಲ್ಲಿ ಈ ಸಂಬಂಧ ಕಚೇರಿಯೊಂದನ್ನು ತೆರೆಯಲಾಗುವುದು ಎಂದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನಿರ್ದೇಶಕಿ ಡಾ. ಅನ್ನಪೂರ್ಣಿ ಸುಬ್ರಮಣ್ಯಂ ಖಗೋಳ ಭೌತಶಾಸ್ತ್ರದ ಬಗ್ಗೆ ಉಪನ್ಯಾಸ ನೀಡಿದರು. ಜೊತೆಗೆ ಈ ಒಡಂಬಡಿಕೆಗೆ ಸಹಿ ಮಾಡಿದರು. ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್, ಪಿಎಂಇಬಿ ನಿರ್ದೇಶಕ ಪ್ರೊ.ಎನ್.ಕೆ.ಲೋಕನಾಥ್, .ಮಾಲಿನಿ, ಪ್ರೊ.ವೆಂಕಟರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.

Key words: Astronomical Physics -Tara Observatory – Chamundi Hills-Mysore university-VC- Prof.G.Hemanth Kumar

ENGLISH SUMMARY…

Astrophysics Planetirum to come up at the foothills of Chamundi in Mysuru: UoM VC
Mysuru, December 10, 2021 (www.justkannada.in): Prof. G. Hemanth Kumar, Vice-Chancellor, University of Mysore, today informed that an Astrophysics Planetarium would be set up at the foothills of Chamundi.
He participated in the inauguration of the external activities and MoU signing program organized jointly by the University of Mysore and Indian Institute of Astrophysics, held at the Vignana Bhavan, in Manasagangotri today.
Speaking on the occasion, he said, “An Astrophysics Planetarium would be built in Mysuru. Three acres of land is reserved for this purpose near the foothills of Chamundi. There is a planetarium in Bengaluru. Similarly, another planetarium will be set up in Mysuru, with the support of the Indian Institute of Astrophysics.”
“Several types of research and studies are going on in the field of Astrophysics. Many students are researching this field. Hence, this new planetarium will be of great help to such students and researchers. The foundation stone laying ceremony will be held in the next month. An office will be opened at the Vignana Bhavan here,” he added.
Indian Institute of Astrophysics Director Dr. Annapoorni Subramaniam delivered a lecture on the subject of astrophysics and she also signed an MoU concerning the construction of the planetarium. Prof. A.P. Jnanaprakash, Registrar (Exams), University of Mysore, PMEB Director Prof. N.K. Loknath, Malini, Prof. Venkataramaiah, and others were present.
Keywords: Mysuru/ Foothills of Chamundi/ Astrophysics Planetarium