ಬೆಂಗಳೂರು, ಮಾರ್ಚ್ 19, 2020 (www.justkannada.in): ಇಷ್ಟು ದಿನ ಆನ್ಫಿಲ್ಡ್ನಲ್ಲಿ ಎದುರಾಳಿ ವಿರುದ್ಧ ಹೋರಾಟ ನಡೆಸ್ತಿದ್ದ ಕ್ರೀಡಾಪಟುಗಳು ಕಣ್ಣಿಗೆ ಕಾಣದ ಹೆಮ್ಮಾರಿಗೆ ಸೋಲಿಸಲು ಚಾಲೆಂಜ್ ಹಾಕುತ್ತಿದ್ದಾರೆ.
ಆಲ್ಮೋಸ್ಟ್ ಎಲ್ಲಾ ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳು ಆನ್ಲೈನ್ನಲ್ಲಿ ಕಾಲಕಳೆಯುವಂತೆ ಆಗಿದೆ. ಆನ್ಲೈನ್ನಲ್ಲಿ ಕಾಲಕಳೆಯುತ್ತಿದ್ದಾರೆ. ಸುಮ್ಮನೆ ಕಾಲ ಕಳೆಯೋದರ ಜೊತೆಗೆ ಕೊರೊನಾ ಸೋಂಕು ವಿರುದ್ಧ ಹೋರಾಟಕ್ಕೆ ಸೇಫ್ ಹ್ಯಾಂಡ್ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಇಷ್ಟೇ ಅಲ್ಲ ಇತರರಿಗೂ ಸೇಫ್ ಹ್ಯಾಂಡ್ ಚಾಲೆಂಜ್ ಎಸೆದು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡ್ತಿದ್ದಾರೆ. ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕ್ರೀಡಾಪಟುಗಳು ಸೇಫ್ಹ್ಯಾಂಡ್ ಚಾಲೆಂಜ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.