ಬೆಂಗಳೂರು,ಜೂನ್,7,2024 (www.justkannada.in): ಭಾರತದ ನೂತನ ರೇಸಿಂಗ್ ಪ್ರತಿಭೆ, 9 ವರ್ಷ ವಯಸ್ಸಿನ ಅತಿಕಾ ಮೀರ್ ಈ ವಾರಾಂತ್ಯದಲ್ಲಿ ಬೆಂಗಳೂರಿನ ಮೆಕೊ ಕಾರ್ಟೊಪಿಯಾದಲ್ಲಿ ನಡೆಯಲಿರುವ ಎಫ್ ಎಂಎಸ್ ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ ಶಿಪ್ ರೊಟಾಕ್ಸ್ ಮ್ಯಾಕ್ಸ್ 2024ರಲ್ಲಿ ಪಾದಾರ್ಪಣೆ ಮಾಡಲಿದ್ದಾರೆ.
ಅಂತಾರಾಷ್ಟ್ರೀಯ ಆಟೋಮೊಬೈಲ್ ಫೆಡರೇಶನ್ (ಎಫ್‌ಐಎ) ಹಾಗೂ ಅಂತಾರಾಷ್ಟ್ರೀಯ ಕಾರ್ಟಿಂಗ್ ಆಯೋಗ (ಸಿಐಕೆ) ಪ್ರಕಾರ 10 ವರ್ಷದೊಳಗಿನ ಮಹಿಳಾ ರೇಸರ್ ಗಳ ಪೈಕಿ ಯಾವುದೇ ರಾಷ್ಟ್ರೀಯ ಚಾಂಪಿಯನ್ ಶಿಪ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಅತಿಕಾ, 2022ರಲ್ಲೇ ತಮಗೆ 7 ವರ್ಷ ವಯಸ್ಸಿದ್ದಾಗ ಚಾಂಪಿಯನ್ ಶಿಪ್ ನ ಎರಡು ರೇಸ್ ಗಳಲ್ಲಿ ಪಾಲ್ಗೊಂಡಿದ್ದರು.
ಕಾಶ್ಮೀರದ ಬಾಲಕಿ ಇದೇ ಮೊದಲ ಬಾರಿಗೆ ಚಾಂಪಿಯನ್ ಶಿಪ್ ನ ಎಲ್ಲಾ 5 ರೇಸ್ ಗಳಲ್ಲೂ ಸ್ಪರ್ಧಿಸಲಿದ್ದಾರೆ. 7 ರಿಂದ 12 ವರ್ಷದೊಳಗಿನವರ ವಿಭಾಗದಲ್ಲಿ ಅತಿಕಾ, ಎಂಸ್ಪೋರ್ಟ್ ರೇಸಿಂಗ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
‘ಬಹಳ ಸ್ಪರ್ಧಾತ್ಮಕತೆಯಿಂದ ಕೂಡಿರಲಿರುವ ಭಾರತೀಯ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಬಹಳ ಉತ್ಸುಕತೆಯಿಂದ ನಾವು ಕಾಯುತ್ತಿದ್ದೇವೆ’ ಎಂದು ಭಾರತದ ಮೊದಲ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್, ಮಾಜಿ ಫಾರ್ಮುಲಾ ಏಷ್ಯಾ ರೇಸರ್ ಆಗಿರುವ ಅತಿಕಾರ ತಂದೆ ಆಸಿಫ್ ಮೀರ್ ಹೇಳಿದ್ದಾರೆ.
ಅತಿಕಾ ಈಗಾಗಲೇ ಕಾಶ್ಮೀರದಲ್ಲಿ ರೇಸಿಂಗ್ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ದುಬೈನಲ್ಲಿ ನೆಲೆಸಿರುವ ಅವರು, ಅಲ್ಲಿನ ಜಾರ್ಜ್ ಗಿಬ್ಬೊನ್ಸ್ ಮೋಟಾರ್ ಸ್ಪೋರ್ಟ್ಸ್ ನೊಂದಿಗೆ ಅಭ್ಯಾಸ ನಡೆಸುತ್ತಾರೆ. ಅತಿಕಾ ಯುರೋಪಿಯನ್ ಹಾಗೂ ಯುಎಇ ಕಾರ್ಟಿಂಗ್ ಚಾಂಪಿಯನ್ ಶಿಪ್ ಗಳಲ್ಲೂ ಸ್ಪರ್ಧಿಸಿ ಈಗಾಗಲೇ ಯಶಸ್ಸು ಗಳಿಸಿದ್ದಾರೆ.
‘ಅತಿಕಾಳನ್ನು ಭಾರತಕ್ಕೆ ಮರಳಿ ಸ್ವಾಗತಿಸಲು ಎಂಸ್ಪೋರ್ಟ್ ಬಹಳ ಸಂತೋಷ ಪಡುತ್ತದೆ. ಆಕೆ ಈಗಾಗಲೇ ಸಾಕಷ್ಟು ಅನುಭವ ಗಳಿಸಿದ್ದು, ಈ ಬಾರಿ ಮೈಕ್ರೋ ಮ್ಯಾಕ್ಸ್ ವಿಭಾಗದಲ್ಲಿ ಪ್ರಶಸ್ತಿ ರೇಸ್ ನಲ್ಲಿ ಸಹಜವಾಗಿಯೇ ಮುಂಚೂಣಿಯಲ್ಲಿ ಇರಲಿದ್ದಾರೆ. ನಾವು ಖಂಡಿತವಾಗಿಯೂ ಜೊತೆಗಾಗಿ ಯಶಸ್ಸು ಕಾಣಲಿದ್ದೇವೆ ಎನ್ನುವ ವಿಶ್ವಾಸವಿದೆ’ ಎಂದು ಎಂಸ್ಪೋರ್ಟ್ ನ ಮುಖ್ಯಸ್ಥ ಅರ್ಮಾನ್ ಎಬ್ರಾಹಿಂ ತಿಳಿಸಿದ್ದಾರೆ.
ಅತಿಕಾ ತಮಗೆ 6 ವರ್ಷವಿದ್ದಾಗಲೇ ಕಾರ್ಟಿಂಗ್ ಆರಂಭಿಸಿದ್ದರು. 2021ರಲ್ಲಿ ಅವರು ಮೊದಲ ಸ್ಪರ್ಧಾತ್ಮಕ ರೇಸ್ ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಮೈಕ್ರೋ ಮ್ಯಾಕ್ಸ್ ಹಾಗೂ ಮಿನಿ ಎಕ್ಸ್ 30 ವಿಭಾಗಗಳಲ್ಲಿ ಸ್ಪರ್ಧಿಸುವ ಅತಿಕಾ, ಸದ್ಯ ಯುಎಇ ಐಎಎಂಇ ರಾಷ್ಟ್ರೀಯ ಚಾಂಪಿಯನ್ ಶಿಪ್, ಮೆನಾ ಕಪ್‌ಗಳಲ್ಲಿ ರನ್ನರ್-ಅಪ್ ಆಗಿದ್ದಾರೆ. ಡಿಎಎಂಸಿ ಕಪ್ ನಲ್ಲಿ 3ನೇ ಸ್ಥಾನ ಗಳಿಸಿದ್ದು ಸೇರಿ ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ.
ಅತಿಕಾ ಯುಎಇ ಐಎಎಂಇ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್ (ಮಿನಿ ಆರ್ ವಿಭಾಗ)ದಲ್ಲಿ ರೇಸ್ ವಿಜೇತೆಯಾಗಿದ್ದು, ಹಲವು ರೇಸ್ ಗಳಲ್ಲಿ ಪೋಲ್ ಪೊಸಿಷನ್ ಪಡೆದಿದ್ದಾರೆ. ಅಲ್ಲದೇ ಅತಿವೇಗದ ಲ್ಯಾಪ್ ಹಾಗೂ ಲ್ಯಾಪ್ ದಾಖಲೆಗಳನ್ನೂ ಹೊಂದಿದ್ದಾರೆ.
‘ನನಗೆ ಕೇವಲ 3 ವರ್ಷ ವಯಸ್ಸಿದ್ದಾಗಿನಿಂದಲೇ ನಮ್ಮ ತಂದೆ ರೇಸ್ ನಲ್ಲಿ ಪಾಲ್ಗೊಳ್ಳುವುದನ್ನು ನಾನು ನೋಡಿದ್ದೇನೆ. ಅವರೊಂದಿಗೆ ನಾನು ಡ್ರೈವಿಂಗ್ ಟೆಕ್ನಿಕ್ ಗಳನ್ನು ಹಾಗೂ ರೇಸಿಂಗ್ ಬಗ್ಗೆ ಚರ್ಚೆ ನಡೆಸುತ್ತೇನೆ. ಭಾರತೀಯ ರಾಷ್ಟ್ರೀಯ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು ನನಗೆ ಬಹಳ ಹೆಮ್ಮೆ ತಂದಿದೆ. 2022ರಲ್ಲಿ ಭಾರತದಲ್ಲೇ ನಾನು ಮೈಕ್ರೋ ಮ್ಯಾಕ್ಸ್ ವಿಭಾಗದಲ್ಲಿ ನನ್ನ ಮೊದಲ ರೇಸ್ ನಲ್ಲಿ ಪಾಲ್ಗೊಂಡಿದ್ದೆ’ ಎಂದು ಅತಿಕಾ ಹೇಳಿದ್ದಾರೆ.
ENGLISH SUMMARY…
India’s new racing sensation to debut in FMSCI National Karting Championship
9-year-old girl Atiqa Mir from Kashmir sets her eyes on the title
Bengaluru, May 7:
India’s latest racing sensation, 9-year-old Atiqa Mir, will make her much-awaited debut in the
MECO-FMSCI National Karting Championship Rotax Max 2024 this weekend at the Meco Kartopia in Bengaluru.
The highest-ranked female driver under 10 years as per FIA (International Automobile Federation) and the CIK (Commission Internationale de Karting) in any national championship got a feel of the competition in India in 2022, taking part in two races as a 7-year-old.
This is the first time she will compete in all five rounds of the Championship. She will turn out for Team MSport Racing in the Micro Max category (7 to 12 years).
“We have been waiting to show our mettle in the highly competitive Indian National Championship. It’s a homecoming for Atiqa,” Atiqa’s father, Asif Mir, India’s first national karting champion and a former Formula Asia Racer, said.
Hailing from Kashmir, Atiqa is already a local star in the state. She now lives in Dubai where she trains with George Gibbons Motorsports. Atiqa juggles between European and UAE Karting Championships.
“We at MSport are happy to welcome Atiqa back to India. She’s gained a lot of experience since her last stint in the country, which makes her a strong prospect to fight at the front in the Micro Max category this year. We hope to achieve a lot of success together,” Armaan Ebrahim of MSport said.
Atiqa started karting when she was just 6 years old. Her first competitive race was in 2021.
Competing in the Micro Max and Mini X30 categories, Atiqa is the reigning Vice-Champion in the UAE IAME National Championship, Vice-Champion in the Mena Cup, 2nd Runner-up in the DAMC Cup among her various triumphs.
Atiqa is a Race winner in the UAE IAME National Karting Championship (Mini R category) and has scored multiple Pole Positions, Fastest Laps and Lap Records too.
“I watched my father race when I was just 3. I discuss driving techniques and race data with him now,” Atiqa explains proudly. “I am looking forward to racing in India where I made my debut in Micro Max in 2022 and I have fond memories of the track,” she added
Key words: Atika Mir, National Karting Championship, Bangalore