ಕೊಪ್ಪಳ, ಅ.24,2024: (www.justkannada.in news) ಜಿಲ್ಲೆಯ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದ ನ್ಯಾಯಧೀಶರು. 98 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿ. ಮೂರು ಮಂದಿಗೆ ಕಠಿಣ ಶಿಕ್ಷೆ ವಿಧಿಸಿ ಕೊಪ್ಪಳ ನ್ಯಾಯಮೂರ್ತಿ ಆದೇಶ.
ಮರಕುಂಬಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ಹಲ್ಲೆ ಪ್ರಕರಣ .101 ಆರೋಪಿಗಳ ವಿರುದ್ಧ ಶಿಕ್ಷೆ ಪ್ರಕಟ. ಕೊಪ್ಪಳ ಜಿಲ್ಲಾ ಕೋರ್ಟ್ ನ್ಯಾಯಾಧೀಶರಿಂದ ಶಿಕ್ಷೆ ಪ್ರಕಟ. 9 ವರ್ಷಗಳ ನಂತರ 101 ತಪ್ಪಿತಸ್ಥರ ವಿರುದ್ದ ಆರೋಪ ಸಾಬೀತು ಶಿಕ್ಷೆ. 98 ಜನರಿಗೆ ಜೀವಾವಧಿ ಶಿಕ್ಷೆ, 3 ಆರೋಪಿಗಳಿಗೆ ಕಠಿಣ ಶಿಕ್ಷೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ತೀರ್ಪು ಪ್ರಕಟ.
ನ್ಯಾಯಾಧೀಶರಾದ ಚಂದ್ರಶೇಖರ್ ಅವರಿಂದ ತೀರ್ಪು ಪ್ರಕಟ. 2014- 2015 ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ನಡೆದಿದ್ದ ಘಟನೆ.
ದಲಿತರ ಹೋಟೆಲ್, ಕೇರಿ ದ್ವಂಸಗೊಳಿಸಿದ್ದ ಸರ್ವಣಿಯರು. ಜತೆಗೆ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ದೊಡ್ಡ ಪ್ರಕರಣ. ರಾಜ್ಯದಲ್ಲಿಯೇ ಸದ್ದು ಮಾಡಿದ್ದ ದಲಿತ ದೌರ್ಜನ್ಯ ಪ್ರಕರಣ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 117 ಜನರ ವಿರುದ್ದ ದೂರು ದಾಖಲಾಗಿತ್ತು. ಆರೋಪಿಗಳಲ್ಲಿ ಹಲವು ಜನರು ಸಾವನ್ನಪ್ಪಿರುವ ಮಾಹಿತಿ. ಶಿಕ್ಷ ಪ್ರಕಟ ಹಿನ್ನೆಲೆ ಅಪರಾಧಿಗಳ ಕುಟುಂಬದ ಮಹಿಳೆಯರು ಮಕ್ಕಳು ಕಣ್ಣೀರು. ಕುಟುಂಬಸ್ಥರನ್ನು ಕಂಡು ಅಪರಾಧಿಗಳು ಸಹ ಕಣ್ಣೀರು.
key words: Atrocities, Dalits, 98 people sentenced, life imprisonment.