ಬೆಂಗಳೂರು, ಡಿಸೆಂಬರ್ ೨೨, ೨೦೨೧ (www.justkannada.in): ಆನ್‌ಲೈನ್ ಗೇಮಿಂಗ್‌ನ ಹವ್ಯಾಸವನ್ನು ಬೆಳೆಸಿಕೊಂಡಿದ್ದAತಹ ಅದ್ವೆöÊತ್ ನಾಯರ್ (ಹೆಸರು ಬದಲಾಯಿಸಿದೆ) ಎಂಬ ೧೫-ವರ್ಷ-ವಯಸ್ಸಿನ ಬಾಲಕನೋರ್ವ ತನ್ನ ಅಪ್ಪನ ಬ್ಯಾಂಕ್ ಖಾತೆಯನ್ನು ಗೇಮಿಂಗ್ ವೆಬ್‌ಸೈಟ್‌ನೊಂದಿಗೆ ಜೋಡಿಸಿದ ಕಾರಣದಿಂದಾಗಿ ಅಪ್ಪ ಬರೋಬ್ಬರಿ ರೂ.೬ ಲಕ್ಷ ನಷ್ಟ ಅನುಭವಿಸಿರುವ ಘಟನೆಯೊಂದು ಬಹಿರಂಗಗೊAಡಿದೆ.
ಬಾಲಕ ಅದ್ವೆöÊತ್ ಯಾವಾಗಲೂ ಮೊಬೈಲ್ ಫೋನ್‌ನಲ್ಲಿ ಒಂದು ಜನಪ್ರಿಯ ಗೇಮ್ ಅನ್ನು ಆಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ. ಆತ ಆ ಗೇಮ್‌ನಲ್ಲಿ ಯಾವುದೋ ನಿರ್ದಿಷ್ಟವಾದ ಹಂತವನ್ನು ತಲುಪಿದ್ದು, ಅದರಿಂದಾಗಿ ರೂ.೫೦ ಹಾಗೂ ರೂ.೮೦ರಂತೆ ಎರಡು ಬಾರಿ ನಗದು ಬಹುಮಾನವನ್ನೂ ಗೆದ್ದುಕೊಂಡ. ಇದರಿಂದ ರೋಮಾಂಚಿತನಾದ ಬಾಲಕ ಅದ್ವೆöÊತ್ ತಾನು ಗೆದ್ದ ಮೊತ್ತ ತನ್ನ ಅಪ್ಪನ ಬ್ಯಾಂಕ್ ಖಾತೆಗೆ ಸೇರಲೆಂಬ ಬಯಕೆಯಿಂದ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಆ ಗೇಮಿಂಗ್ ವೆಬ್‌ಸೈಟ್‌ನಲ್ಲಿ ತುಂಬಿದ. ನಂತರ ಒಮ್ಮೆ ರೂ.೮೦ ನಗದು ಬಹುಮಾನವೂ ಬಂತು. ಆದರೆ ನಂತರದಲ್ಲಿ ಪ್ರತಿ ತಿಂಗಳು ಅಪ್ಪನ ಉಳಿತಾಯ ಬ್ಯಾಂಕ್ ಖಾತೆಯಿಂದ ರೂ.೫೦,೦೦೦ ದಿಂದ ರೂ.೮೦,೦೦೦ ದವರೆಗೆ ಹಣ ಕಡಿತವಾಗುತ್ತಾ ಹೋಯಿತು. ಈ ರೀತಿ ಸುಮಾರು ಆರು ತಿಂಗಳು ಕಳೆದ ನಂತರ ಅದ್ವೆöÊತ್‌ನ ಅಪ್ಪ ಈ ಹಗರಣವನ್ನು ಗಮನಿಸಿದರು. ಕೂಡಲೇ ಜಾಗೃತಗೊಂಡು ತಮ್ಮ ಸಿಮ್ ಕಾರ್ಡ್ನ್ನು ಬದಲಿಸಿ, ತಮ್ಮ ಬ್ಯಾಂಕ್ ಖಾತೆಯನ್ನು ಹೊಸ ಸಿಮ್‌ಗೆ ಜೋಡಿಸಿದರು. ಇದು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೋಸದ ಜಾಲಕ್ಕೆ ಸಿಲುಕುತ್ತಿರುವ ಅನೇಕ ಯುವಜನರ ಅನುಭವಗಳ ಪೈಕಿ ಒಂದು ಪ್ರಕರಣವಷ್ಟೇ.
ಬೆಂಗಳೂರು ಪೊಲೀಸ್ ವಿಭಾಗದ ಸೈಬರ್ ಘಟಕದ ಉಪನಿರೀಕ್ಷಕಿ ಶೀಲಾ ಆರ್. ಗೌಡ ಅವರು ತಿಳಿಸುವಂತೆ ‘ಡೇಟಿಂಗ್ ಆ್ಯಪ್‌ಗಳಲ್ಲಿ ತಮ್ಮ ಖಾಸಗಿ ಚಿತ್ರಗಳನ್ನು ಶೇರ್ ಮಾಡಿರುವ ಕಾರಣದಿಂದಾಗಿ ಅನೇಕ ಯುವಜನರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಇದರಿಂದಾಗಿ ಯುವಜನರು ಖಿನ್ನತೆಯನ್ನು ಅನುಭವಿಸುವುದರ ಜೊತೆಗೆ ದೊಡ್ಡ ಮೊತ್ತದ ಹಣವನ್ನೂ ಕಳೆದುಕೊಳ್ಳುತ್ತಿದ್ದಾರಂತೆ.
“ಅದ್ವೆöÊತ್ ಅವರ ಅಪ್ಪನ ಪ್ರಕರಣದಲ್ಲಿ ತಪಾಸಣೆ ನಡೆಸಿದ ನಂತರ, ಅವರು ಆರು ತಿಂಗಳಲ್ಲಿ ರೂ.೬ ಲಕ್ಷ ಕಳೆದುಕೊಂಡಿರುವುದು ನಮ್ಮ ಗಮನಕ್ಕೆ ಬಂತು. ಮೋಸಗಾರರು ಎರಡೂ ಖಾತೆಗಳನ್ನು ಪರಸ್ಪರ ಜೋಡಿಸಿ, ಬಹಳ ಜಾಣ್ಮೆಯಿಂದ ಸ್ವಯಂಚಾಲಿತವಾಗಿ ಹಣ ವರ್ಗಾವಣೆಯನ್ನು ಮಾಡಿದ್ದರು. ಈ ಮೋಸವನ್ನು ತಡೆಗಟ್ಟಲು ಅವರಿಗೆ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿದ್ದ ತಮ್ಮ ಸಿಮ್ ಅನ್ನು ರದ್ದುಪಡಿಸಬೇಕಾಯಿತು,” ಎಂದು ಶೀಲಾ ತಿಳಿಸಿದ್ದಾರೆ.
ಆದ್ದರಿಂದ ಯುವಜನರು ಅನಾಮಧೇಯರೊಂದಿಗೆ ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ತಮ್ಮ ಪೋಷಕರ ಅನುಮತಿ ಇಲ್ಲದೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು, ಎನ್ನುತ್ತಾರೆ ಶೀಲಾ.
ಗೇಮಿಂಗ್ ಸಂಗಾತಿ
ವಿಶೇಷವಾಗಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ಯುವಜನರಿಗೆ ಆನ್‌ಲೈನ್ ಗೇಮಿಂಗ್ ಹಾಗೂ ಸಾಮಾಜಿಕ ಜಾಲತಾಣಗಳೇ ಅಚ್ಚುಮೆಚ್ಚಿನ ಸಂಗಾತಿಗಳಾಗಿದ್ದವು.
ಅಪರಾಧವಿಜ್ಞಾನ ತಜ್ಞ ಡಾ. ಟಿ.ಪಿ ವಿಪಿನ್ ಅವರು ವಿವರಿಸುವಂತೆ ಅನೇಕ ಯುವಜನರು ಆ ಸಮಯದಲ್ಲಿ ದಿನವೊಂದಕ್ಕೆ ೧೦ ಗಂಟೆಗಳಿಗೂ ಮಿಗಲಾಗಿ ಇಂಟರ್‌ನೆಟ್, ಪೋಸ್ಟಿಂಗ್, ಟ್ವೀಟಿಂಗ್ ಹಾಗೂ ಆನ್‌ಲೈನ್ ಕಂಟೆAಟ್ ಶೇರಿಂಗ್‌ನAತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನುತ್ತಾರೆ.
“ತಡರಾತ್ರಿ ವೇಳೆಯಲ್ಲಿ ಸಾಮಾಜಿಕ ಮಾಧ್ಯಮ ಜಾಲತಾಣಗಳ ಬಳಕೆ ಬಹಳ ಹೆಚ್ಚಾಗಿರುತ್ತದೆ. ಜ್ಞಾನ ಸಂಪಾದನೆಯ ಜೊತೆಗೆ ಇಂದಿನ ಯುವಕ, ಯುವತಿಯರಿಗೆ ವೈಯಕ್ತಿಕವಾಗಿ ತಾವು ಆಕರ್ಷಣೆಯ ಕೇಂದ್ರವಾಗಬೇಕು ಎಂದು ಹಂಬಲವಿರುತ್ತದೆ. ಹಾಗಾಗಿ ತಮ್ಮ ಸಾಮಾಜಿಕ ವೃತ್ತಗಳಲ್ಲಿ ಏನೇನೋ ಅಪ್‌ಡೇಟ್‌ಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ಸಾಮಾಜಿಕ ಮಾಧ್ಯಮದ ಹವ್ಯಾಸ ಖಿನ್ನತೆ ಮತ್ತು ಆತಂಕದAತಹ ಸಮಸ್ಯೆಗಳನ್ನು ಸೃಷ್ಟಿಸುತ್ತದೆ,” ಎಂದು ವಿವರಿಸಿದ್ದಾರೆ.
“ಪೋಷಕರು ತಮ್ಮ ಮಕ್ಕಳ ಎಲೆಕ್ಟಾçನಿಕ್ ಉಪಕರಣಗಳಲ್ಲಿ ‘parental control apps’ ಅನ್ನು ಅಳವಡಿಸುವುದು ಉತ್ತಮ. ಇದು ಅಧಿಕೃತ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾವಹಿಸಬಹುದು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಹಕಾರಿ,” ಎಂದು ತಿಳಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words: attached – bank account- online gaming -website
Loss