ಅಪಾರ್ಟ್ ಮೆಂಟ್ ಮೇಲೆ ದಾಳಿ : 3.89 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ: ಇಬ್ಬರ ಬಂಧನ…

ಉಡುಪಿ,ನವೆಂಬರ್,2,2020(www.justkannada.in):  ಖಚಿತ ಮಾಹಿತಿ ಮೇರೆಗೆ ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ಮೇಲೆ ಪೊಲೀಸರು  ದಾಳಿ ನಡೆಸಿ 3.89 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ ಪಡೆದು  ಪ್ರಕರಣ ಸಂಬಂಧ ಇಬ್ಬರು ಬಂಧಿಸಲಾಗಿದೆ.

ಕಳೆದ ಶನಿವಾರರಂದು ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕುಮಾರ್ ಚಂದ್ರ ಅವರ ನೇತೃತ್ವದಲ್ಲಿ  ಖಚಿತ ಮಾಹಿತಿ ಮೇಲೆ ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ಮೇಲೆ  ಪೊಲೀಸರು ದಾಳಿ ನಡೆಸಿ 32 ಗ್ರಾಂ  ವಿದೇಶಿ ಹೈಡ್ರೊವಿಡ್ ಗಾಂಜಾ , 9 ಗಾಂ ಬ್ರೌನ್ ಶುಗರ್  ಹಾಗೂ 25 MDMA ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ  ನಿಷೇದಿತ ಮಾದಕ ವಸ್ತುಗಳ  ಒಟ್ಟು ಅಂದಾಜು ಮೌಲ್ಯ ರೂ  3,89,000 ಆಗಿದೆ.  ಇನ್ನು ಈ ಸಂಬಂಧ ಅಧಿತಿ ಸೌರಬ ಅಪಾರ್ಟ್ ಮೆಂಟ್ ರೂ ಮ್ ನಂಬರ್ 204 ರಲ್ಲಿ ವಾಸವಿದ್ದ ಕೆ ಎಮ್ ಸಿ ಮೆಡಿಕಲ್ ಕಾಲೇಜಿನ ವೈದ್ಯ  ವಿದ್ಯಾರ್ಥಿ ಆದಿತ್ಯ ಪ್ರಭು ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹತಿ  ಸಂಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವುದು ಬಾಕಿ ಇರುತ್ತದೆ. ಕಳೆದ 1 ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ  ಸಿಂಥೆಟಿಕ್ ಡ್ರಗ್ಸ್ ಗಳ  4ನೇ ಪ್ರಕರಣವಾಗಿದೆ.  attack – apartment-3.89 lakh –drugs- seized- two arrested-udupi

ಇದೇ ಪ್ರಕರಣಕ್ಕೆ  ಸಂಬಂದಿಸಿದಂತೆ  ಅನಿಶ್ ಎಂಬ ಅಮೇರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದು,  ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ . ಹಾಗೆಯೇ ಡ್ರಗ್ಸ್ ವಿರುದ್ದ  ಕಾರ್ಯಚರಣೆ ಇನ್ನೂಮುಂದುವರಿಯುತ್ತದೆ ಎಂದು ಉಡುಪಿ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಐಪಿಎಸ್  ಮಾಹಿತಿ ನೀಡಿದ್ದಾರೆ.

Key words: attack – apartment-3.89 lakh –drugs- seized- two arrested-udupi